ಒಳಚರಂಡಿ ನೀರಿನ ಸಮಸ್ಯೆ ಶೀಘ್ರ ಕ್ರಮ: ಅಬ್ಬಯ್ಯ


ಹುಬ್ಬಳ್ಳಿ,ಜ.3:ನೇಕಾರ ನಗರ ಮುಖ್ಯರಸ್ತೆಯಲ್ಲಿ ಹಾದು ಹೋಗಿರುವ ಕಿರು ನಾಲಾ ಹಾಗೂ ಅದರಲ್ಲೇ ಹರಿಯುತ್ತಿರುವ ಒಳಚರಂಡಿ ನೀರಿನ ಸಮಸ್ಯೆಯಿಂದÀ ಸ್ಥಳೀಯರಿಗೆ ಮುಕ್ತಿ ದೊರಕಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಪಾಲಿಕೆ ಆಯುಕ್ತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ನೇಕಾರ ನಗರದ ಛಬ್ಬಿ ಪ್ಲಾಟ್ ಹಾಗೂ ಶ್ರೀರಾಮ ಕಾಲನಿಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ಇಲ್ಲಿನ ಹಳೆಯ ಯುಜಿಡಿ ಪೈಪ್‍ಲೈನ್‍ಗಳು ಪದೇ ಪದೇ ತುಂಬಿ ತುಳುಕುತ್ತಿವೆ. ಇದರಿಂದ ಸುತ್ತಲಿನ ನಿವಾಸಿಗಳು ಮೂಗು ಮುಚ್ಚಿಕೊಂಡೇ ಜೀವನ ಸಾಗಿಸುವಂತಾಗಿದ್ದು, ಶಾಶ್ವತ ಪರಿಹಾರ ರೂಪಿಸುವುದು ಅತ್ಯವಶ್ಯವಿದೆ ಎಂದರು.
ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಮಾತನಾಡಿ, ಕಿರು ನಾಲಾದೊಳಗೆ ಸುಮಾರು 10 ಯುಜಿಡಿ ಲೈನ್ ಗಳು ಹಾದು ಹೋಗಿರುವುದರಿಂದ ಪದೇ ಪದೇ ಸಮಸ್ಯೆ ಉಂಟಾಗುತ್ತಿದೆ. ಪೈಪ್‍ಲೈನ್‍ಗಳನ್ನು ಜೆಸಿಬಿ ಹಾಗೂ ಜೆಟ್ಟಿಂಗ್ ಮಶೀನ್ ಸಹಾಯದಿಂದ ಸ್ವಚ್ಛಗೊಳಿಸಿ ಪರೀಕ್ಷಿಬೇಕಿದೆ. ನಂತರವೂ ಸಮಸ್ಯೆ ಬಗೆಹರಿಯದಿದ್ದರೆ ಹೊಸ ಪೈಪ್‍ಪೈನ್ ಅಳವಡಿಕೆಗೆ ಕ್ರಮ ಕೈಗೊಳ್ಳೋಣ ಎಂದು ಸಲಹೆ ನೀಡಿದರು.
ಮಳೆಗಾಲದಲ್ಲಿ ನಾಲಾ ನೀರು ರಸ್ತೆಗೆ ಹರಿಯುತ್ತಿದ್ದು, ತೀವ್ರ ಸಮಸ್ಯೆ ಉಂಟಾಗುತ್ತಿದೆ. ವಾರದೊಳಗೆ ಜೆಟ್ಟಿಂಗ್ ಮಶೀನ್ ಸಹಾಯದಿಂದ ಯುಜಿಡಿ ಲೈನ್ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿ 10 ದಿನದ ನಂತರ ಪುನಃ ಸ್ಥಳ ಪರಿಶೀಲಿಸಿ ಹೊಸ ಪೈಪ್‍ಲೈನ್ ಅಳವಡಿಕೆಗ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರು, ಮುಖಂಡರಾದ ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾಜದಾರ, ಶಂಕರಯ್ಯ ಹಿರೇಮಠ, ಕಾಶೀನಾಥ ಪವಾರ್, ಮನೋಹರ ಕುಲಕರ್ಣಿ, ಶಿವು ಮಡಿವಾಳರ, ಚನ್ನಬಸಪ್ಪ ಎಮ್ಮಿ, ಪರಶುರಾಂ ಧೋಂಗಡಿ, ಶೋಭಾ ಕಮತರ, ಬಡಿಗೇರ, ಉಷಾ ಮಾಳಗಿ, ವಿ.ಬಿ. ಕುಲಕರ್ಣಿ, ಶೈಲಜಾ ಬೆಳಗಲಿ, ಇತರರು ಇದ್ದರು.