ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಗುದ್ದಲಿಪೂಜೆ

ಮೈಸೂರು, ನ.19: ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರ ಎಸ್.ಎಫ್.ಸಿ ವಿವೇಚನಾ ಅನುದಾನದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ ಅವರು ಮೈಸೂರು ಮಹಾನಗರ ಪಾಲಿಕೆ ವಾರ್ಡ್ ಸಂ-03 ರ ಮಾನ್ಯ ಸದಸ್ಯರಾದ ಶ್ರೀಧರ್ ಅವರ ಸಮ್ಮುಖದಲ್ಲಿ ಗುದ್ದಲಿಪೂಜೆಯನ್ನು ನೆರವೇರಿಸಿದರು.
ವಾರ್ಡ್ ನಂ-03 ರ ಮಹದೇಶ್ವರ ಬಡಾವಣೆ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಒಳಚರಂಡಿಯನ್ನು ನಿರ್ಮಾಣವನ್ನು ಕೈಗೊಳ್ಳಲಿರುವ ಕಾಮಗಾರಿಯ ವೆಚ್ಚ 40.00 ಲಕ್ಷರೂ.ದ್ದಾಗಿದೆ.
ಕೊಳವೆಮಾರ್ಗದ ವಿವರ ಇಂತಿದೆ : 450ಮಿಮೀ ವ್ಯಾಸದ ಆರ್ ಸಿಸಿ ಒಳಚರಂಡಿ ಕೊಳವೆ ಮಾರ್ಗ 250 ಮೀಟರ್, 300 ಮಿಮೀ ವ್ಯಾದ ಆರ್ ಸಿಸಿ ಒಳಚರಂಡಿ ಕೊಳವೆ ಮಾರ್ಗ 290 ಮೀಟರ್, 250 ಮಿಮೀ ವ್ಯಾಸದ ಒಳಚರಂಡಿ ಕೊಳವೆ ಮಾರ್ಗ 120ಮೀಟರ್, 200 ಮಿಮೀ ವ್ಯಾಸದ ಒಳಚರಂಡಿ ಕೊಳವೆಮಾರ್ಗ 90 ಮೀಟರ್, ಆಳುಗುಂಡಿಗಳ ಸಂಖ್ಯೆ 25, ಗುತ್ತಿಗೆದಾರ ವಿ.ಕುಬೇರ ನೇತೃತ್ವದಲ್ಲಿ ಕಾಮಗಾರಿ ನಡೆಯಲಿದೆ.
ವಾರ್ಡ್ ನಂ-3, ಮಹದೇಶ್ವರ ಬಡಾವಣೆ, ತ್ರಿನೇತ್ರ ಸರ್ಕಲ್, ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭ ಚಾಮರಾಜ ಕ್ಷೇತ್ರದ ಭಾ.ಜ.ಪ ಮುಖಂಡರಾದ ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು.