ಒಳಕೋಟೆ ಭವಾನಿ ಮಂದಿರಕ್ಕೆ ರಾಜ್ಯಪಾಲ ಭೇಟಿ

ಬೀದರ್:ಅ.17: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇಲ್ಲಿಯ ಐತಿಹಾಸಿಕ ಕೋಟೆ ಒಳಗೆ ಇರುವ ಒಳಕೋಟೆ ಭವಾನಿ ಮಂದಿರಕ್ಕೆ ಭೇಟಿ ನೀಡಿದರು.
ಕಾರನಲ್ಲಿ ಬಂದ ರಾಜ್ಯಪಾಲರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ದೇವಸ್ಥಾನ ಸಮಿತಿಯ ಪ್ರಮುಖರು ಗುಲಾಬಿ ಹೂವು ಕೊಟ್ಟು ಬರಮಾಡಿಕೊಂಡರು.
ಬಳಿಕ ರಾಜ್ಯಪಾಲರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿಯವರು ರಾಜ್ಯಪಾಲರಿಗೆ ಸನ್ಮಾನಿಸಿ, ನೆನಪಿನ ಕಾಣಿಕೆಯಾಗಿ ದೇವಿ ಮೂರ್ತಿ ನೀಡಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಭೀಮಣ್ಣ ಪಾಟೀಲ, ಪ್ರಮುಖರಾದ ಪೃಥ್ವಿಸಿಂಗ್ ಠಾಕೂರ್, ಈಶ್ವರಸಿಂಗ್ ಠಾಕೂರ್, ಸೋಮಶೇಖರ ಪಾಟೀಲ ಗಾದಗಿ, ಶಶಿಧರ ಹೊಸಳ್ಳಿ, ನಂದಕಿಶೋರ ವರ್ಮಾ, ಮಾರುತಿ ಕೋರೆ, ಅಶೋಕ ಪಾಟೀಲ, ವೀರಸಂಗಪ್ಪ ಪಾಟೀಲ, ಶರಣಪ್ಪ ಮೊದಲಾದವರು ಇದ್ದರು.