ಒರೆಗಲ್ಲಿಗೆ ಹಚ್ಚುವ ಚಿಂತನೆಯೇ ಜ್ಞಾನ – ಪ್ರಜ್ಞಾ ಮತ್ತಿಹಳ್ಳಿ

ಧಾರವಾಡ, ಮಾ.28: ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡರೆ ಮಾತ್ರ ಜ್ಞಾನ ಲಭಿಸುವುದಿಲ್ಲ. ಯಾವುದೇ ವಿಚಾರವನ್ನು ಒರೆಗಲ್ಲಿಗೆ ಹಚ್ಚಿದಾಗ ಬರುವ ಚಿಂತನವೇ ನಿಜವಾದ ಜ್ಞಾನ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ರಂಗಾಯಣದ ಸುವರ್ಣ ಸಾಂಸ್ಕøತಿಕ ಸಮುಚ್ಛಯದಲ್ಲಿ ನಡೆದ ಗಾಂಧೀಜಿ- ಕಸ್ತೂರ ಬಾ 150 ವಿಚಾರ ಸಂಕಿರಣದ ಎರಡನೇ ಗೋಷ್ಠಿ ಕಸ್ತೂರ ಬಾ: ಮಹಿಳಾ ಸಶಕ್ತೀಕರಣ ವಿಷಯ ಕುರಿತು ಮಾತನಾಡಿದರು.

ಗಾಂಧೀಜಿ ಅವರು ಕಸ್ತೂರ ಬಾ ಅವರನ್ನು ಬಾಲ್ಯ ವಿವಾಹವಾದರೂ ಅನಕ್ಷರಸ್ಥರಾದ ಕಸ್ತೂರ ಬಾ ಅವರಿಗೆ ಪ್ರತಿನಿತ್ಯ ದಿನಪತ್ರಿಕೆ, ಪುಸ್ತಕ ಹಾಗೂ ಅಕ್ಷರಾಭ್ಯಾಸಗಳನ್ನು ಮಾಡುವಂತೆ ಪೆÇ್ರೀತ್ಸಾಹಿಸುವ ಮೂಲಕ ಅವರು ಪ್ರಬುದ್ಧತೆ ಹೊಂದಲು ಪ್ರೇರಣೆಯಾಗಿ, ಸಹಕಾರ ನೀಡುತ್ತಿದ್ದರು ಎಂದರು.

ಅಂದಿನ ಕಾಲದಲ್ಲಿ ಶಾಲೆಗಳಿರಲಿಲ್ಲ ಆದರೆ ಗಂಡನ ಸಹಾಯದಿಂದ ವಿದ್ಯೆ ಕಲಿತು ಪ್ರಬುದ್ಧತೆ ಹೊಂದುತ್ತಿದ್ದರು. ಮಹಿಳೆಯರು ಬೌದ್ಧಿಕ ವಿಕಾಸವನ್ನು ರೂಪಿಸಿಕೊಳ್ಳುವುದೆ ನಿಜವಾದ ಸಶಕ್ತೀಕರಣ ಎಂದು ಅವರು ಹೇಳಿದರು.

 ನಾಟಕಕಾರ್ತಿ ಡಾ. ಸುಜಾತಾ ಅಕ್ಕಿ ಮಾತನಾಡಿ, ಸತ್ಯ, ಅಹಿಂಸೆ, ಸರಳತೆ ಮತ್ತು ದೇಶಿಯತೆ ಅಳವಡಿಸಿಕೊಂಡಿದ್ದ ಗಾಂಧೀಜಿ ಅವರು, ಪ್ರತಿ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ, ತಮ್ಮಲ್ಲೆ ಅರ್ಥೈಸಿಕೊಂಡು ಸರಳವಾಗಿ ಕಸ್ತೂರ ಬಾ ಗಾಂಧಿ ಅವರಿಗೆ ತಿಳಿಸುತ್ತಿದ್ದರು. ಗಾಂಧೀಜಿ ಮತ್ತು ಕಸ್ತೂರ ಬಾ ಅವರು ಆದರ್ಶ ದಂಪತಿಗಳಾಗಿ ಜಗತ್ತಿಗೆ ಮಾದರಿಯಾಗಿದ್ದರು ಎಂದರು.

ಗಾಂಧೀಜಿ ಮತ್ತು ಕಸ್ತೂರ ಬಾ ಅವರು ಸಾರ್ವಜನಿಕ ಜೀವನವನ್ನು ನಡೆಸಲಿಲ್ಲ ಬದಲಾಗಿ ತಮ್ಮ ಜೀವನವನ್ನೆ ಸಾರ್ವಜನಿಕಗೊಳಿಸಿದ್ದರು. ಅವರಿಬ್ಬರ ಮಧ್ಯೆ ಎμÉ್ಟೀ ವಾದ, ಚರ್ಚೆಗಳಾಗುತ್ತಿದ್ದರೂ, ಮಾನಸಿಕವಾಗಿ ಅವರಿಬ್ಬರೂ ಒಂದೇ ಆಗಿದ್ದರು. ಬಿಡಿ ಬಿಡಿಯಾಗಿ ಓದುತ್ತಿದ್ದ ಕಸ್ತೂರ ಬಾ, ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಟ್ಟರು. ಮಹಿಳೆಯರು ಶಿಕ್ಷಣ ಪಡೆಯಬೇಕು ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಹಿರಿಯ ರಂಗಕರ್ಮಿ ಡಾ. ಬಾಳಣ್ಣ ಶೀಗಿಹಳ್ಳಿ ಮಾತನಾಡಿ, ಗಾಂಧೀಜಿಯವರ ವಿಚಾರಗಳನ್ನು ಸರಿಯಾಗಿ ಗ್ರಹಿಸಿ, ಅರ್ಥೈಸಿಕೊಂಡು ಪ್ರಾಯೋಗಿಕವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿಯವರು ಉನ್ನತ ಮಟ್ಟದ ವ್ಯಕ್ತಿತ್ವ ಹೊಂದಿದ್ದರು. ಮಹಾತ್ಮ ಗಾಂಧೀಜಿ ಹಾಗೂ ಕಸ್ತೂರ ಬಾ ಜೀವನಚರಿತ್ರೆಯನ್ನು ಬಹಳ ಆಳವಾಗಿ ಮತ್ತು ಸಮಚಿತ್ತದಿಂದ ಓದಿದಾಗ ಮಾತ್ರ ಅವರ ಬಗ್ಗೆ ಸರಿಯಾದ ತಿಳುವಳಿಕೆ ಮೂಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ವಹಿಸಿದ್ದರು.