ಒಮಿಕ್ರಾನ್ ಭೀತಿ ನೋಡಲ್ ಅಧಿಕಾರಿಗಳ ನೇಮಕ

ಬೆಂಗಳೂರು, ಡಿ.6-ಕೊರೊನಾ ರೂಪಾಂತರಿ ಒಮಿಕ್ರಾನ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ರೂಪಾಂತರಿ ಒಮಿಕ್ರಾನ್‌ ವೈರಾಣು ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಸೂಚಿಸಿತ್ತು. ಈ ಸಂಬಂಧ ಇನ್ನೂ ಹೆಚ್ಚಿನ ನಿಗಾವಣೆ ಮತ್ತು ಸಮರ್ಥ ರೀತಿಯಲ್ಲಿ ಮೇಲುಸ್ತುವಾರಿ ಮಾಡಲು ಉನ್ನತ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ಈ ಸಂಬಂಧ 7 ಮಂದಿ ಐಎಎಸ್‌ ಅಧಿಕಾರಿಗಳ ತಂಡ ರಚಿಸಿ, ಅವರನ್ನು ವಿವಿಧ ವಿಭಾಗಗಳಿಗೆ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.
ನೋಡಲ್ ಅಧಿಕಾರಿಗಳ ತಂಡ:
ಮುನೀಶ್ ಮೌದ್ಗಿಲ್ – ರಾಜ್ಯ ವಾರ್ ರೂಂ ಲಿಕ್ವಿಡ್ ಆಕ್ಸಿಜನ್ ಪೂರೈಕೆ
ಪಂಕಜ್ ಕುಮಾರ್ ಪಾಂಡೆ – ಹೋಮ್ ಐಸೋಲೇಷನ್ ನಿರೀಕ್ಷಣೆ
ಎಂ.ಶಿಖಾ – ವಿದೇಶದಿಂದ ಬರುವ ಪ್ರಯಾಣಿಕರ ಟ್ರ್ಯಾಕಿಂಗ್ ಮತ್ತು ಸ್ಕ್ರೀನಿಂಗ್ ನೋಡಲ್ ಅಧಿಕಾರಿ
ಪ್ರತಾಪ್ ರೆಡ್ಡಿ ಮತ್ತು ಗುಂಜನ್ ಕೃಷ್ಣ – ಆಕ್ಸಿಜನ್ ಸರಬರಾಜು
ಶಿಲ್ಪಾನಾಗ್ – ನೋಡಲ್ ಅಧಿಕಾರಿಗಳ ನಿರೀಕ್ಷಕರು, ರಾಜ್ಯ ನಿರೀಕ್ಷಕರ ಘಟಕ
ಕುಮಾರ್ ಪುಷ್ಕರ್ – ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್
ಎಂ.ಟಿ ರೇಜು – ಮೆಡಿಸಿನ್