ಒಬ್ಬ ವಿದ್ಯಾರ್ಥಿ ಡಿಬಾರ್, ಪರೀಕ್ಷಾ ಕೇಂದ್ರ ರದ್ದು

ಕಲಬುರಗಿ,ನ.7-ಗುಲಬರ್ಗಾ ವಿಶ್ವವಿದ್ಯಾಲಯದಿಂದ 2020-21ನೇ ಸಾಲಿನ ಸ್ನಾತಕ ಕೋರ್ಸಿನ ಅಂತಿಮ ಸೆಮಿಸ್ಟರ್ ನ ಪರೀಕ್ಷೆಗಳು ಅ.25 ರಿಂದ ಪ್ರಾರಂಭಗೊಂಡಿದ್ದು, ನ.6 ರಂದು ಕುಲಪತಿ ಪ್ರೊ.ದಯಾನಂದ ಅಗಸರ ಅವರು ನಗರದ ಪರೀಕ್ಷಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿದರು.
ಲುಕ್ಮಾನ್ ಪದವಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಮೊಬೈಲ್ ಬಳಸಿ ನಕಲು ಮಾಡುತ್ತಿದ್ದ ಸೈಯ್ಯದ ಅಕ್ಬರ್ ಹುಸೇನ್ ಎಂಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದರು. ಅದೇ ರೀತಿ ಶ್ರೀಸಾಯಿ ಪ್ರಸಾದ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಪರೀಕ್ಷಾ ಅವ್ಯವಸ್ಥೆಯನ್ನು ಗಮನಿಸಿ, ಪರೀಕ್ಷಾ ಕೇಂದ್ರದಲ್ಲಿ ಆಂತರಿಕ ಹಿರಿಯ ಮೇಲ್ವಿಚಾರಕರಾದ ಪ್ರಾಂಶುಪಾಲರು ಗೈರು ಹಾಜರಿರುವುದನ್ನು ಹಾಗೂ ಪರೀಕ್ಷಾ ಕೊಠಡಿಯಲ್ಲಿ ಸೂಕ್ತ ಕಿರಿಯ ಮೇಲ್ವಿಚಾರಕರು ಇರದೇ ಇದ್ದುದ್ದನ್ನು ಗಮನಿಸಿ ಶ್ರೀಸಾಯಿ ಪ್ರಸಾದ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ತಕ್ಷಣದಿಂದ ರದ್ದುಪಡಿಸಿ, ಮುಂದಿನ ಎಲ್ಲಾ ಪರೀಕ್ಷೆಗಳನ್ನು ನಡೆಸಲು ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯಕ್ಕೆ ಜೋಡಣೆ ಮಾಡಲು ಸೂಚಿಸಿದರು.
ಶ್ರೀಸಾಯಿ ಪ್ರಸಾದ ಪರೀಕ್ಷಾ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ನ.7 ರಿಂದ ನಡೆಯುವ ಎಲ್ಲಾ ಪರೀಕ್ಷೆಗಳನ್ನು ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಬರೆಯುವಂತೆ ಸೂಚಿಸಿದರು.