ಒಬ್ಬಳೇ ಹೆಂಡತಿ, ಒಂದೇ ಸಂಸಾರ; ತಿರುಗೇಟು

ಬೆಂಗಳೂರು,ಮಾ.24- ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಚಿವ ಕೆ. ಸುಧಾಕರ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ

‘ಬಹಳ ಸಂತೋಷ, ಸುಧಾಕರ್ ಅವರು ಇಂತಹ ನುಡಿಮುತ್ತುಗಳನ್ನು ಇಡೀ ರಾಜ್ಯಕ್ಕೆ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಚಿವರ ಹೇಳಿಕೆ ಇದು ಇಲ್ಲಿ ಚರ್ಚೆ ಮಾಡುವ ವಿಚಾರವಲ್ಲ, ಸದನದಲ್ಲಿ ಚರ್ಚೆ ಮಾಡಬೇಕು. ಈ ಬಗ್ಗೆ ನಮ್ಮ ನಾಯಕರ ಜತೆ ಮಾತನಾಡುತ್ತೇನೆ. ಇದು ಸಾಮೂಹಿಕ ವಿಚಾರ’ ಎಂದರು.

ಸಿಡಿ ಹಗರಣದ ಕುರಿತು ಕಾಂಗ್ರೆಸ್ ಸದನದಲ್ಲಿ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ದ ಆರೋಪ‌‌ ಮಾಡುವ ಭರಾಟೆಯಲ್ಲಿ ಎಲ್ಲಾ ಶಾಸಕರ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ್ದರು.

‘ರಾಜ್ಯದ 225 ಶಾಸಕರ ಅನೈತಿಕ ಸಂಬಂಧದ ಬಗ್ಗೆ ತನಿಖೆಯಾಗಲಿ. ತನಿಖೆಯಾದ್ರೆ ಎಲ್ಲರ ಬಂಡವಾಳ ಜನಕ್ಕೆ ತಿಳಿಯುತ್ತದೆ. ನಾನು ಒಪನ್ ಆಗಿ ಚಾಲೆಂಜ್ ಮಾಡುತ್ತಿದ್ದೇನೆ. ಏನೇ ಬಂದರೂ ನಾನು ಎದುರಿಸಲು ಸಿದ್ಧವಾಗಿದ್ದೆನೆ’ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಶಿವಕುಮಾರ್ ಈ ರೀತಿ ಪ್ರತಿಕ್ರಿಯೆ ನೀಡಿ‌ ತಿರುಗೇಟು ನೀಡಿದ್ದಾರೆ