ಒಬ್ಬರಿಗೆ ಒಬ್ಬರು ನೇರವಾಗಬೇಕು- ಮಲ್ಲಪ್ಪ ಚಾಗಭಾವಿ

ಎಸ್.ಸಿ, ಎಸ್.ಟಿ ನೌಕರರಿಂದ ಸನ್ಮಾನ ಸಂಘಟಿತರಾಗಬೇಕು
ಸಿರವಾರ.ಅ.೫- ಸರ್ಕಾರಿ ನೌಕರರಲ್ಲಿ ಎಸ್.ಸಿ ಮತ್ತು ಎಸ್.ಟಿ ನೌಕರರು ಸಂಘಟಿತರಾಗಬೇಕು, ನಮ್ಮ ಸಮಾಜದ ನೌಕರರಿಗೆ ಕಷ್ಟ ಏಂದು ಬಂದಾಗ ಅವರಿಗೆ ನೇರವಾದಾಗ ಸಂಘ ರಚನೆಗೆ ಸಾರ್ಥಕವಾಗುತ್ತದೆ ಎಂದು ಎಸ್.ಸಿ- ಎಸ್.ಟಿ ನೌಕರ ಸಂಘದ ಸಿರವಾರ ತಾಲೂಕ ಘಟಕದ ಗೌರವ ಅದ್ಯಕ್ಷ ಮಲ್ಲಪ್ಪ ಚಾಗಭಾವಿ ಹೇಳಿದರು.
ಪ್ರೌಢಶಾಲೆ ಶಿಕ್ಷಕರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೌನೇಶ ಹಣಗಿ, ಸಂಘಕ್ಕೆ ಉಪಾದ್ಯಕ್ಷರಾಗಿ ನೇಮಕವಾದ ಬಾಗಲವಾಡ ಗ್ರಾ.ಪಂ ಕಾರ್ಯದರ್ಶಿ ಈಕಪ್ಪ ಮುರ್ಕಿಗುಡ್ಡ ಹಾಗೂ ಶಿಕ್ಷಕ ವೃತ್ತಿಯಲ್ಲಿ ೨೦ ವರ್ಷ ಪೂರೈಸಿರುವ ವಿದ್ಯಾನಗರ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಜೀವ ಅವರಿಗೆ ಎಸ್.ಸಿ, ಎಸ್.ಟಿ ನೌಕರರ ಸಂಘದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಎಲ್ಲಾ ಜನರೂ ಅದರಲೂ ಎಸ್.ಸಿ.ಎಸ್.ಟಿ ಜನಾಂಗದವರು ಇಂದು ಸರ್ಕಾರಿ ನೌಕರಯಲ್ಲಿದೆವೆಂದರು ಅದು ಬಾಬಾ ಸೇಹಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆ ನೀಡಿರುವ ಮಿಸಲಾತಿ ಎಂಬ ಬಿಕ್ಷೆಯಿಂದ ಎಂಬುದು ಮರೆಯಬಾರದು. ನಿತ್ಯ ಅಂಬೇಡ್ಕರ ಸ್ಮರಣೆ ಮಾಡಬೆಕು. ನಮ್ಮ ಸುತ್ತಮುತ್ತ ಎಸ್.ಸಿ ಎಸ್.ಟಿ ಜನಾಂಗದ ಪ್ರತಿಭಾವಂತರು ಇರುತ್ತಾರೆ.
ಅಂತವರಿಗೆ ಸ್ಪರ್ಧಾತ್ಮಕ ಪರೀಕ್ಷೆ , ಇನಿತರ ಕುರಿತು ಮಾರ್ಗದರ್ಶನ ನೀಡಬೇಕು. ನೌಕರರು ಬೇರೆ ಕಡೆಯಿಂದ ವರ್ಗವಾಗಿ ಅಥವಾ ನೇಮಕವಾಗಿ ಬಂದಿರುತ್ತಾರೆ ಅಂತವರಿಗೆ ನೇರವಾಗಿ ಇರೊಣ, ನಾವು ಸಂಘಟಿತರಾದಾಗ ಸೌಲಭ್ಯಗಳು ದೊರೆಯುತ್ತವೆ ಎಂದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಮೌನೇಶ ಹಣಗಿ, ಶಿಕ್ಷಕ ಸಂಜೀವ, ಎಸ್.ಸಿ ಎಸ್.ಟಿ ನೌಕರ ಸಂಘದ ಉಪಾದ್ಯಕ್ಷ ಈಕಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಸಿ- ಎಸ್.ಟಿ ನೌಕರ ಸಂಘದ ಅದ್ಯಕ್ಷ ಏಸುಮಿತ್ರ, ಶಿಕ್ಷಕರ ಮಹೇಶ, ಪಾರ್ಥ, ದಲಿತ ಮುಖಂಡರಾದ ಎಂ.ಮನೋಹರ,ಮೌನೇಶ ಪಿತಗಲ್, ಚನ್ನಪ್ಪ ಬೂದಿಹಾಳ, ದೇವು,ಸುದೇಂದ್ರ ಸೇರಿದಂತೆ ಇನ್ನಿತರರು ಇದ್ದರು.