ಒಬಿಸಿ ಪಟ್ಟಿಗೆ ಕುಂಚಿಟಿಗರ ಸೇರ್ಪಡೆಗೆ ಯತ್ನ: ಚಿದಾನಂದಗೌಡ

ಮಧುಗಿರಿ, ನ. ೧೮- ಕುಂಚಿಟಿಗ ಜನಾಂಗವನ್ನು ಒಬಿಸಿ ಪಟ್ಟಿಗೆ ಸೇರಿಸಲು ನಿಸ್ವಾರ್ಥವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಗ್ಗೆ ಕಾರ್ಯೋನ್ಮಖರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಹೇಳಿದರು. ಕೊರಟಗೆರೆ ತಾಲ್ಲೂಕಿನ ಕುಂಚಿಟಿಗ ಮಠ ಎಲೆರಾಂಪುರದಲ್ಲಿ ಶ್ರೀ ಹನುಮಂತನಾಥಸ್ವಾಮೀಜಿ ರವರ ಆಶೀರ್ವಾದ ಪಡೆದು ಅವರು ಮಾತನಾಡಿದರು.
ಕುಗ್ರಾಮದಲ್ಲಿ ಹುಟ್ಟಿದ ನಾನು ಅನೇಕ ಏರಿಳಿತಗಳು ಕಂಡು ಬದಲಾದ ಸನ್ನಿವೇಶದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಹಿನ್ನೆಲೆಯಲ್ಲಿ ಪದವೀಧರ ಹಾಗೂ ಶಿಕ್ಷಕರ ನೋವುಗಳನ್ನು ಹತ್ತಿರದಿಂದ ತಿಳಿಯುವಂತಾಯಿತು ಎಂದರು.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಸ್ಯೆಗಳನ್ನು ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಷ್ಟ್ರೀಯ ಪಕ್ಷ ಬಿಜೆಪಿ ನನ್ನನ್ನು ಗುರುತಿಸಿ ಉತ್ತಮ ಜವಾಬ್ದಾರಿ ನೀಡಿದೆ. ಪಕ್ಷಕ್ಕೆ ಪದವೀಧರ ಬಂಧುಗಳಿಗೆ ಸಮಾಜಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಶ್ರೀಮಠದ ಅಶೀರ್ವಾದ, ಶ್ರೀರಕ್ಷೆ ನನ್ನ ಮೇಲೆ ನನ್ನ ಕುಟುಂಬದ ಮೇಲೆ ಇರಲಿ ಎಂದರು.