ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಅಜರಾಮರ- ಶಿವರಾಜ

ಮಾನ್ವಿ.ನ.೧೧-ವೀರವನಿತೆ ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಅಜರಾಮರ ಎಂದು ಛಲುವಾದಿ ಮಹಾಸಭಾ ತಾಲೂಕಾಧ್ಯಕ್ಷ ಶಿವರಾಜ ಉಮಳಿಹೊಸೂರು ಹೇಳಿದರು.
ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಛಲುವಾದಿ ಮಹಾಸಭಾದಿಂದ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವರ ಜಯಂತಿ ಕಾರ್ಯಕ್ರಮದಲ್ಲಿ ಒನಕೆ ಓಬವ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಚಿತ್ರದುರ್ಗ ಕೋಟೆಯ ಮದಕರಿ ನಾಯಕರ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಹೆಂಡಿತಿಯೇ ಈ ಒನಕೆ ಓಬವ್ವ. ಒನಕೆ ಓಬವ್ವ ಗಂಡನು ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಿತ್ರದುರ್ಗ ಕೋಟೆಗೆ ಹೈದರಾಲಿಯ ಸೈನಿಕರ ಕಿಂಡಿಯಿಂದ ನುಗ್ಗುತ್ತಿದ್ದರು. ಇದನ್ನು ಗಮನಿಸದ ಒನಕೆ ಓಬವ್ವಳು ತನ್ನ ಒನಕೆಯನ್ನು ಅಸ್ತ್ರವಾಗಿಟ್ಟುಕೊಂಡು ಹೈದರಾಲಿ ಸೈನಿಕರನ್ನು ಒಬ್ಬೊಬ್ಬರನ್ನು ಸೆದೆಬಡಿದು ಹೊರ ಎಳೆಯುತ್ತಿದ್ದಳು. ಈಕೆಯೇ ಧೈರ್ಯ, ಸಾಹಸ ಮತ್ತು ಸಮಯ ಪ್ರಜ್ಞೆ ಎಲ್ಲರ ಮನ ಗೆದ್ದಿತ್ತು ಅಂದಿನಿಂದ ಈಕೆಗೆ ಒನಕೆ ಓಬವ್ವ ಎಂದು ಕರೆದರು. ಈಕೆಯೆ ಧೈರ್ಯ ಮತ್ತು ಸಾಹಸವನ್ನು ನಾವೆಲ್ಲರು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ನಂತರ ಸಂಪಾದಕರಾದ ಪಿ. ಚನ್ನಬವ ಬಾಗಲವಾಡ, ಲಕ್ಷ್ಮಣರಾವ್ ಕಪಗಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ನರಸಪ್ಪ ಜೂಕೂರು, ಸಾಬಣ್ಣ ಕಪಗಲ್, ಮಹಾಸಭಾ ಪ್ರ. ಕಾರ್ಯದರ್ಶಿ ದತ್ತಾತ್ರೇಯ ವಕೀಲರು, ಕಾಶಿನಾಥ ಕುರ್ಡಿ, ಮಲ್ಲಿಕಾರ್ಜುನ ಬೈಯಲ್ ಮರ್ಚೆಡ್, ಈಶಪ್ಪ ವಕೀಲರು ಬೈಯಲ್ ಮರ್ಚೆಡ್, ಬಸವರಾಜ್ ಜಾನೇಕಲ್, ಮೌನೇಶ ಕೋರಿ, ನಾಗರಾಜ್ ಕೋರಿ ಮಾನ್ವಿ, ತಾಯಣ್ಣ ಕಪಗಲ್, ಕಾಮೇಶ ಮಾನ್ವಿ, ಲಿಂಗಪ್ಪ ಮಾನ್ವಿ, ನರಸಿಂಹ ಸೀಕಲ್, ಯಶವಂತ ಜಾನೇಕಲ್, ಕಿರಣ ಉದ್ಬಾಳ್ ಸೇರಿದಂತೆ ಅನೇಕರು ಇದ್ದರು.