ಒತ್ತು ಶಾವಿಗೆ

ಬೇಕಾಗುವ ಸಾಮಗ್ರಿಗಳು

*ಕುಸುಬಲು ಅಕ್ಕಿ – ೧/೨ ಕೆ.ಜಿ
*ಕರಿ ಎಳ್ಳು – ೨ ಚಮಚ
*ಬಿಳಿ ಎಳ್ಳು – ೨ ಚಮಚ
*ಹುರಿಗಡಲೆ – ಅರ್ಧ ಕಪ್
*ಬೆಲ್ಲ – ೫೦ ಗ್ರಾಂ
*ಏಲಕ್ಕಿ ಪುಡಿ
*ಉಪ್ಪು
*ನೀರು

ಮಾಡುವ ವಿಧಾನ :

ಕರಿ ಎಳ್ಳು, ಬಿಳಿ ಎಳ್ಳು, ಹುರಿಗಡಲೆಯನ್ನು ಪುಡಿ ಮಾಡಿ ಕೊಳ್ಳಿ. ತೆಂಗಿನ ತುರಿ, ಬೆಲ್ಲ, ಏಲಕ್ಕಿ ಪುಡಿ, ಅಗತ್ಯವಿರುವಷ್ಟು ನೀರು ಹಾಕಿ ರುಬ್ಬಿ ಕೊಳ್ಳಿ. ಈ ಮಿಶ್ರಣಕ್ಕೆ ಕುಸುಬಲು ಅಕ್ಕಿ, ನೀರು, ಉಪ್ಪು ಸೇರಿಸಿ ಮತ್ತೆ ರುಬ್ಬಿ. ರುಬ್ಬಿದ ಹಿಟ್ಟನ್ನು ತೆಗೆದು ಇಡ್ಲಿ ಪ್ಲೇಟ್‌ಗೆ ಹಾಕಿ ಕುಕ್ಕರಿನಲ್ಲಿಟ್ಟು ಇಡ್ಲಿಯಂತೆ ಬೇಯಿಸಿ. ಬೆಂದ ಮೇಲೆ ತೆಗೆದು ಒತ್ತು ಶಾವಿಗೆಯ ಒರಳಿಗೆ ಹಾಕಿ. ಪ್ಲೇಟ್‌ನ ಮೇಲೆ ಒತ್ತಿರಿ. ಶಾವಿಗೆಯ ಮೇಲೆ ತಯಾರಿಸಿಟ್ಟುಕೊಂಡ ಪುಡಿ, ಕಾಯಿ ಬೆಲ್ಲದ ಹಾಲು ಹಾಕಿದರೆ ಒತ್ತು ಶಾವಿಗೆ ಸವಿಯಲು ರೆಡಿ.