ಒತ್ತುವರಿ ತೆರವು ಮಾಡದಿದ್ದಕ್ಕೆ ಆಕ್ರೋಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.21:- ಸರ್ಕಾರಿ ಭೂಮಿಗೆ ನೂರಾರು ಮಂದಿ ಗ್ರಾಮಸ್ಥರು ಲಗ್ಗೆ ಹಾಕಿ ನಿವೇಶನ ಮಾಡಲು ಶೆಡ್ ನಿರ್ಮಾಣ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ನಡೆದಿದೆ.
ಎಷ್ಟು ಬಾರಿ ಮನವಿ ಮಾಡಿದರೂ ಆಡಳಿತ ವರ್ಗಕ್ಯಾರೆ ಎನ್ನದಿದ್ದರಿಂದ ತಪರಾಕಿ ಕೊಟ್ಟಿರುವ ಗ್ರಾಮಸ್ಥರು ಸರ್ಕಾರಿ ಭೂಮಿಗೆ ಲಗ್ಗೆ ಇಟ್ಟು ನಿವೇಶನ ಮಾಡಿಕೊಳ್ಳುತ್ತಿದ್ದಾರೆ.
ಬ್ಯಾಡಮೂಡ್ಲು ಗ್ರಾಮದ ಸರ್ವೇ ನಂ.174ರಲ್ಲಿ ನೂರಾರುಎಕರೆಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು 1995ರಿಂದಲೂ ಜಿಲ್ಲಾಡಳಿತಕ್ಕೆ ದೂರು ಕೊಡುತ್ತಲೇ ಬಂದಿದ್ದರು. ಜನತಾದರ್ಶನದಲ್ಲೂ ಈ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡ ವೇಳೆ 10 ದಿನದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಸಚಿವರು ಭರವಸೆ ಕೊಟ್ಟಿದ್ದರು.
ಆದರೆ, ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಂದು ಕಂದಾಯ ಇಲಾಖೆಗೆ ಸೇರಿದ ಜಾಗಕ್ಕೆ ಲಗ್ಗೆ ಇಟ್ಟು ನಿವೇಶನ ಮಾಡಿಕೊಳ್ಳುತ್ತಿದ್ದಾರೆ.
ನಮಗೇ ಸೈಟಿಲ್ಲ ಅದಕ್ಕೇ ವಶ:
ಇನ್ನು, ಈ ಕುರಿತು ದೊಡ್ಡಮೋಳೆ ಗ್ರಾಪಂ ಸದಸ್ಯರಾದ ರಾಜಣ್ಣ, ಮರಿಸ್ವಾಮಿ ಮಾತನಾಡಿ, ಎರಡು-ಮೂರು ಸಾಗುವಳಿಗೆ ಭೂಮಿ ಪಡೆದು ಹತ್ತಾರು ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. 191 ಎಕರೆ ಪ್ರದೇಶದಲ್ಲಿ ಈಗ ಉಳಿದಿರುವುದೇ 3 ಎಕರೆ, ಈ ಹಿನ್ನೆಲೆಯಲ್ಲಿ ನಿವೇಶನ ಇಲ್ಲದೇ ಬದುಕುದೂಡುತ್ತಿದ್ದ 150 ಕ್ಕೂ ಹೆಚ್ಚು ಮಂದಿ ಬಂದು ಸೈಟ್ ಮಾಡಿಕೊಂಡಿದ್ದಾರೆ ಎಂದರು.
ಇನ್ನು, ರಾಜಮ್ಮ ಎಂಬವರು ಮಾತನಾಡಿ, ನಮಗೆ ಮನೆ ಇಲ್ಲಾ- ಜಮೀನಿನಲ್ಲ ಅದಕ್ಕೆ ಬಂದುಇಲ್ಲಿಜಾಗ ಹಿಡಿದೆವು, ನಮ್ಮನ್ನು ಎತ್ತಂಗಡಿ ಮಾಡಲು ಬರುವ ಮುನ್ನ ನೂರಾರು ಎಕರೆ ಜಮೀನನ್ನು ಗುಳುಂ ಮಾಡಿರುವವರ ಬಳಿಯಿಂದ ಮೊದಲು ಜಮೀನನ್ನು ಪಡೆಯಬೇಕು, ಇಲ್ಲದಿದ್ದರೆ ನಾವು ಈ ಜಾಗ ಬಿಡುವುದಿಲ್ಲ ಎಂದು ಹೇಳಿದರು.
ಒಟ್ಟಿನಲ್ಲಿ, ಒತ್ತುವರಿತೆರವು ಮಾಡದಿದ್ದಕ್ಕೇ ಉಳಿದ ಸರ್ಕಾರಿಜಾಗವನ್ನುಗ್ರಾಮಸ್ಥರೇತಾವೇ ವಶ ಪಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.