ಒತ್ತುವರಿ ತೆರವಿಗೆ ಮನವಿ

ಕೆ.ಆರ್.ಪುರ,ಡಿ.೪- ಕೆಆರ್ ಪುರ ಸಮೀಪದ ಚಿಕ್ಕಬಸವನಪುರದಲ್ಲಿ ೫ ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪೂರ್ವ ತಾಲ್ಲೂಕು ವಿಶೇಷ ತಹಶೀಲ್ದಾರ್ ಎಸ್ , ಆರ್ ಮಹೇಶ್ ಅವರಿಗೆ ಗ್ರಾಮದ ನಿವಾಸಿಗಳು ದೂರು ನೀಡಿ ಒತ್ತುವರಿ ಜಾಗವನ್ನ ತೆರವುಗೊಳ್ಳಿಸುವಂತೆ ಮನವಿ ಪತ್ರಸಲ್ಲಿಸಿದ್ದಾರೆ .
ಈ ವೇಳೆ ದೂರುದಾರ ಪ್ರತಾಪ್ ಕುಮಾರ್ ಮಾತನಾಡಿ ಚಿಕ್ಕಬಸವನಪುರದ ಸರ್ವೆ ನಂ. ೧. ರಲ್ಲಿ ೧೬ ಎಕರೆ, ೧೮ ಗುಂಟೆ ಸರ್ಕಾರಿ ಜಮೀನಿದ್ದು, ಇದರ ಪೈಕಿ ೪ ಎಕರೆ ೨೮ ಗುಂಟೆ ಖರಾಬು ಜಾಗವಾಗಿದ್ದು, ಉಳಿದ ೮ ಎಕರೆ ೧೦ ಗುಂಟೆ ಜಾಗದಲ್ಲಿ ೩ ಎಕರೆ ೧೦ ಗುಂಟೆ ಭೂಮಿ ಡಿ ರಾಮಯ್ಯರೆಡ್ಡಿ ಎಂಬುವವರಿಗೆ ಮಂಜೂರಾಗಿದೆ. ಉಳಿದ ೫ ಎಕರೆ ಸರ್ಕಾರಿ ಭೂಮಿ ಕಬಳಿಸಲು ಅವರ ಅಣ್ಣತಮ್ಮದಿರು ಸರ್ಕಾರಿ ಜಾಗ ನಮ್ಮ ಸ್ವತ್ತು ಎಂದು ನ್ಯಾಯಲಯದ ಮೊರೆ ಹೋಗಿದ್ದು ,ನ್ಯಾಯಾಲಯ ಇದು ಸರ್ಕಾರಿ ಭೂಮಿ ಎಂದು ಸ್ಪಷ್ಟಪಡಿಸಿದೆ . ಆದರೆ ಕೆಲವರು ವರ್ತೂರಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ,ಒಂದು ಎಕರೆ ಇಪ್ಪತ್ತು ಗುಂಟೆ ಭೂಮಿಯನ್ನ
ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿದರು.