ಒತ್ತುವರಿ ಜಾಗ ತೆರವು

ಮೈಸೂರು, ಡಿ.7:- ಮೈಸೂರು ನಗರದ ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಎಫ್ ಟಿಎಸ್ ವೃತ್ತದ ಬಳಿಯ ಪಿ ಎಸ್ ಐ ಕರುಣಾಪುರ ಚರ್ಚ್ ನವರು ಒತ್ತುವರಿ ಮಾಡಿಕೊಂಡಿದ್ದಾರೆಂದು ಹೇಳಲಾದ ಜಾಗವನ್ನು ಇಂದು ಮುಂಜಾನೆ ಬಿಗಿ ಪೆÇಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಮೈಸೂರು ಮಹಾನಗರ ಪಾಲಿಕೆಯ ವಲಯ ವಲಯ ಕಚೇರಿ 7 ಸಹಾಯಕ ಆಯುಕ್ತರ ನೇತೃತ್ವದಲ್ಲಿ ಕೋರ್ಟ್ ಆದೇಶದ ಅನುಸಾರ ಈ ಒತ್ತುವರಿ ಜಾಗವನ್ನು ತೆರವು ಗೊಳಿಸಲಾಗುತ್ತಿದೆ.
ಕಳೆದ 3-4ದಿನಗಳಿಂದ ಪೂರ್ವ ಯೋಜಿತವಾಗಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇಂದು ಮುಂಜಾನೆ 5ಗಂಟೆಯಿಂದಲೇ ಕಾರ್ಯಾಚರಣೆ ನಡೆದಿದೆ.