ಒತ್ತುವರಿ ಜಾಗದಲ್ಲಿ ವಸತಿ ನಿಲಯ ನಿರ್ಮಾಣ: ಕ್ರಮಕ್ಕೆ ಆಗ್ರಹ

ಸಂಜೆವಾಣಿ ವಾರ್ತೆ
ಮಾನ್ವಿ.ಏ.೦೧- ಪಟ್ಟಣದ ಯರಮದೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನಿರ್ಮಾಣವಾಗಿರು ಇಂದಿರಾಗಾಂಧಿ ವಸತಿ ನಿಲಯ ಒತ್ತುವರಿ ಮಾಡಿರುವ ರಸ್ತೆಯಲ್ಲಿ ವಸತಿ ನಿಲಯ ನಿರ್ಮಾಣ ಮಾಡಿರುವ ವ್ಯಕ್ತಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ದಲಿತ ಮತ್ತು ಮೈನಾರಿಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷ ಜಾವೀದ್ ಖಾನ್ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿ ಮಾತಾನಾಡಿದ ಅವರು ವಸತಿ ನಿಲಯ ನಿರ್ಮಾಣ ಮಾಡಿರುವ ಮಾರ್ಗವಾಗಿ ಹಜರತ್ ಸೈಯಾದ್ ತಾಜುದ್ದೀನ್ ಬಾಬಾ ಹಾಗೂ ಹಜರತ್ ಸೈಯಾದ್ ಸಿರಾಜ್ಜುದ್ದೀನ್ ಬಾಬಾ ದರ್ಗಾಕ್ಕೆ ತೆರಳುವ ಮೂವತ್ತು ಫೀಟ್ ರಸ್ತೆಯನ್ನು ಅತಿಕ್ರಮಣ ಮಾಡಿದರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನರಸಪ್ಪ ಜೂಕೂರು, ಗಂಗಾಧರ ರಾವ್, ಅಯಾಜ್ ಖಾನ್ ಇದ್ದರು.