ಒತ್ತಾಯ ಪೂರ್ವಕ ಎನ್ ಇಪಿ ಅಳವಡಿಕೆ; ಎಐಡಿಎಸ್ ಓ ಪ್ರತಿಭಟನೆ

ದಾವಣಗೆರೆ.ಜು.೨೯: ಒತ್ತಾಯ ಪೂರ್ವಕ ಎನ್ ಇಪಿ, ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರದಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಮಹಾನ್ ಧರ್ಮ ನಿರಪೇಕ್ಷ ಮಾನವತಾವಾದಿ  ಈಶ್ವರ  ಚಂದ್ರ ವಿದ್ಯಾಸಾಗರ್ ಅವರ ಸ್ಮರಣ ದಿನದ ಅಂಗವಾಗಿ ರಾಜ್ಯವ್ಯಾಪಿ ಸಾರ್ವಜನಿಕ ಶಿಕ್ಷಣ ಉಳಿಸಿ‌ ದಿನದ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ಆಯೋಜಿಸಿತ್ತು. ಪ್ರತಿಭಟನೆಯನ್ನು ಉದ್ದೇಶಿಸಿ  ಎಐಡಿಎಸ್‌ಓನ ಜಿಲ್ಲಾ  ಕಾರ್ಯದರ್ಶಿ ಪೂಜಾ ನಂದಿಹಳ್ಳಿ   ಅವರು ಮಾತನಾಡಿ, ಈ ವರ್ಷ ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಸರ್ಕಾರ ಹೇಳಿದೆ. ಈ ಸುದ್ದಿಯಿಂದ ರಾಜ್ಯದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಸರ್ಕಾರದ ನಿರ್ಧಾರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶಾಶ್ವತವಾಗಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುನೀತ್ ಕುಮಾರ್ ಮಾತನಾಡಿ, ಇಂದಿನ ಲಾಭಕೋರ ವ್ಯವಸ್ಥೆಯ ಅಡಿಯಲ್ಲಿ ಸಿಲುಕಿ ಶಿಕ್ಷಣ ಕ್ಷೇತ್ರ ಕಮರಿ ಹೋಗುತ್ತಿದೆ‌. ಸರ್ಕಾರದ ನೀತಿಗಳು ಶಿಕ್ಷಣವನ್ನು ಮತ್ತಷ್ಟು ದುಬಾರಿಗೊಳಿಸುವತ್ತ, ಖಾಸಗೀಕರಣಗೊಳಿಸುವತ್ತ ರೂಪುಗೊಳ್ಳುತ್ತಿವೆ. ಅಂತಹ ಒಂದು ನೀತಿ ಈಗ ಅತ್ಯಂತ ಚರ್ಚೆಗೆ ಹಾಗೂ ವಿವಾದಕ್ಕೆ ತುತ್ತಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಹಲವು ಶಿಕ್ಷಣ ವಿರೋಧಿ, ಬಡ ಜನ ವಿರೋಧಿ ಪ್ರತಿಪಾದನೆಗಳು ಅಡಕವಾಗುವೆ. ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಎನ್ನುವುದು ಇದೆ. ಕರ್ನಾಟಕದಲ್ಲಿ ಅಂತಹ 13,800 ಸರ್ಕಾರಿ ಶಾಲೆಗಳ ಮುಚ್ಚುವಿಕೆಯು ರಾಷ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.ಶಿಕ್ಷಣ ಸಾರ್ವತ್ರಿಕವಾಗಬೇಕು, ಹುಟ್ಟುವ ಪ್ರತಿ ಮಗುವಿಗೂ ಶಿಕ್ಷಣದ ಬಾಗಿಲುಗಳು ತೆರೆದಿರಬೇಕು ಎಂಬುದು‌ ಎಲ್ಲರ  ಆಶಯ. ಅವರ ಉತ್ತರಾಧಿಕಾರಿಗಳಾಗಿ ಇಂದು ನಾವು ಜನರಿಗಾಗಿ ಇರುವ ಸರ್ಕಾರಿ ಸಂಸ್ಥೆಗಳನ್ನು ಮುಚ್ಚುವ ಹಕ್ಕು ಸರ್ಕಾರಕ್ಕೆ ಇಲ್ಲ. ನಮ್ಮ ಶಾಲೆ ನಮ್ಮ ಹಕ್ಕು. ಅದನ್ನು ನಮ್ಮಿಂದ ಕಸಿಯಲು ನಾವು ಬಿಡುವುದಿಲ್ಲ ಎಂಬ ಸಂಕಲ್ಪ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪ್ರತಿಭಟನೆಯಲ್ಲಿ ಎಐಡಿಎಸ್ಓ ನ ಜಿಲ್ಲಾ‌ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಜಿಲ್ಲಾ ಕಚೇರಿ ಕಾರ್ಯದರ್ಶಿ ಬಿ.ಕಾವ್ಯ, ಜಿಲ್ಲಾ ಸೆಕ್ರೆಟರಿ ಸದಸ್ಯರಾದ ಜಿ.ಪುಷ್ಪ, ಅಭಿಷೇಕ್, ಆಂಜನೇಯ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.