ಒತ್ತಡ ರಹಿತ ಜೀವನವನ್ನು ನಡೆಸಲು ಸಂಗೀತ ಸ್ಪೂರ್ತಿ

ಚಿತ್ರದುರ್ಗ.ಅ.೨೫;  ನಗರದ ಶ್ರೀಸಿರಿಸಂಪಿಗೆ ಸಾಂಸ್ಕೃತಿಕ ಸಾಮಾಜಿಕ ಶೈಕ್ಷಣಿಕ ಸಂಸ್ಥೆ (ರಿ) ವತಿಯಿಂದ ಶ್ರೀಸಿರಿಸಂಪಿಗೆ ಸಂಸ್ಥೆ ಮಹಾ ಪೋಷಕರಾದ ಮೂರನೇ ಪುಣ್ಯಸ್ಮರಣೆ ಅಂಗವಾಗಿ  ನಗರದ ಸ್ಟೇಡಿಯಂ ಮುಂಭಾಗದ ನಗರ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 12 ವರ್ಷ ಮೆಲ್ಪಟ್ಟವರಿಗೆ ಸುಗಮ ಸಂಗೀತ ಹಾಡುಗಾರಿಕೆ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿಗಳಾದ ಸುಹಾಸ್ ಅವರು ಮಾತನಾಡುತ್ತಾ ಸಂಸ್ಥೆ ಮಕ್ಕಳಿಗೆ ಶಿಕ್ಷಣದೂಂದಿಗೆ ಸಂಗೀತದ ಶಿಕ್ಷಣ ನೀಡುವ ಯೋಜನೆ ಉತ್ತಮವಾಗಿದೆ ಒತ್ತಡರಹಿತ ಜೀವನವನ್ನು ನಡೆಸಲು ಸಂಗೀತ ಸ್ಪೂರ್ತಿಯಾಗಿದೆ ಕೇಂದ್ರಸರ್ಕಾರವು ಇತ್ತಿಚಿಗೆ ತಂದ ಶಿಕ್ಷಣ ನೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಸಂಗೀತ ಕಲಿಯುವುದರಿಂದ ಸ್ಪಷ್ಟ ಉಚ್ಚಾರಣೆ ಮಾತುಗಾರಿಕೆ ಏಕಾಗ್ರತೆ ಆತ್ಮವಿಶ್ವಾಸ ತುಂಬುತ್ತದೆ ಎಂದರು.
 ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಎಂ.ದೇವರಾಜು ಮಾತನಾಡಿ ಸಂಸ್ಥೆಯು ಕಾರ್ಯ ಯಶಸ್ವಿಯಾಗಲಿ ಸಂಸ್ಥೆಯ ಪೋಷಕರಾದ ದ್ಯಾಮಯ್ಯ ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಅದಕ್ಕೆ ನೈಜ ಉದಾಹರಣೆ ಅನೇಕ ಸಸಿಗಳನ್ನು ಬೆಳೆಸಿ ಪರಿಸರ ಉಳಿಸಿದ್ದಾರೆ. ಪ್ರಾಣಿಗಳಿಗೆ ಔಷಧವನ್ನು ನೀಡುತ್ತಿದ್ದರು ಅಂತಹ ಸರಳಜೀವಿ ಇಂತಹ ಪುಣ್ಯವಂತರ ಪುಣ್ಯಸ್ಮರಣೆ ಅಂಗವಾಗಿ ಈ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಿ.ಶ್ರೀಕುಮಾರ್ ನಮ್ಮ ಸಂಸ್ಥೆಯು ಸೃಜನಾತ್ಮಕ ಚಟುವಟಿಕೆಗಳು ಮತ್ತು ಮಕ್ಕಳಿಗೆ ಸಂಗೀತ ಮತ್ತು ಸಂಸ್ಕಾರ ಕಲಿಸಿ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಅನೇಕ ಹೋಸ ಕಾರ್ಯಕ್ರಮಗಳನ್ನು ಮಾಡುತ್ತಿದೆ ಸಂಸ್ಥೆ ಕೆಲಸ ಮಾಡುತ್ತಿದೆ. ಸಂಸ್ಥೆಯ ಪ್ರತಿವರ್ಷವೂ ಸಿರಿಸಂಪಿಗೆ ಪುರಸ್ಕಾರವನ್ನು ಸಹ ನೀಡುತ್ತಿದೆ ಎಂದರು ಸಂಗೀತ ಕಲಿಯಲು ಆಸಕ್ತಿ ಇದ್ದು ಅಭಿನಯ ಕಲಿಯಲು ಆಸಕ್ತಿ ಇರುವ ಯಾವುದೇ ವಯೋಮಾನದ ವ್ಯಕ್ತಿಗಳು ನಮ್ಮ ಸಂಸ್ಥೆಯಲ್ಲಿ ನೀಡುತ್ತಿರುವ ತರಗತಿಯನ್ನು ಪಡೆದುಕೊಂಡು ವೇದಿಕೆ ಮೂಲಕ ಪ್ರತಿಭೆಯನ್ನು ಗುರುತಿಸಲಾಗುವುದು ಇಂದಿನಿಂದ ಹತ್ತು ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ತರಗತಿಯನ್ನು ನಡೆಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ನಗರಸಭೆಯ ಶ್ರೀಮತಿ ರೇಣುಕಾ  ಮಾತನಾಡಿ ಒಂದು ಗೀತೆಯನ್ನು ಹಾಡಿ ರಂಜಿಸಿದರು ಸಾಹಿತಿ ನಿರ್ಧೇಶಕ ದೇವರತ್ನ ಮಂಜು. ಎಮ್.ಕೆ ಹರೀಶ್ ಸಿದ್ದಿಸಮಾದಿ ಯೋಗ ಗುರು ಕುಮಾರಸ್ವಾಮಿ ಉಪಸ್ಥಿತರಿದ್ದರು.