ಒತ್ತಡ ಮುಕ್ತ ಪರೀಕ್ಷೆ ಬರೆಯಲು: ಎಕ್ಸಾಮ್ ವಾರಿಯರ್ ಸಹಕಾರಿ; ಪ್ರಧಾನಿ

New Delhi, Sep 08 (ANI): Prime Minister, Narendra Modi addressing at the inauguration of the Patrika Gate in Jaipur, through video conferencing in New Delhi on Tuesday. (ANI Photo)

ನವದೆಹಲಿ, ಮಾ.29- ವಿದ್ಯಾರ್ಥಿಗಳು ಒತ್ತಡ ಮುಕ್ತವಾಗಿ ಪರೀಕ್ಷೆ ಬರೆಯಲು ಎಕ್ಸಾಮ್ ವಾರಿಯರ್ ಸಹಕಾರಿಯಾಗಲಿದೆ‌ ಎಂದು‌ ಪ್ರಧಾನಿ ನರೇಂದ್ರ ಮೋದಿ‌ ಹೇಳಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಅನೇಕ ಚರ್ಚೆ ಸಂವಾದದ ಬಳಿಕ ಪುಸ್ತಕ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಸ ಆವೃತ್ತಿಯ ಎಕ್ಸಾಮ್ ವಾರಿಯರ್ಸ್ ಪುಸ್ತಕದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಅನೇಕ ಸಂಗತಿಗಳಿವೆ ಎಂದು‌ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೂ ಇದು ಸಹಕಾರಿಯಾಗಿದೆ. ಪೋಷಕರು ಮತ್ತು ಶಿಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಅಧ್ಯಯನದ ಭಾಗವನ್ನು ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ರಚನೆ;

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರೆದಿರುವ “ಎಕ್ಸಾಮ್ ವಾರಿಯರ್ಸ್” ಹೊಸ ಆವೃತ್ತಿ ಈಗ ಲಭ್ಯವಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹೊಸ ಮಂತ್ರಗಳು ಈ ಆವೃತ್ತಿಯಲ್ಲಿವೆ. ಎಕ್ಸಾಮ್ ವಾರಿಯರ್ಸ್ ಕೃತಿ ರಿಟೇಲ್ ಮಳಿಗೆಗಳಲ್ಲಿ ಹಾಗೂ ಆನ್‍ಲೈನ್‍ನಲ್ಲಿ ಲಭ್ಯವಿದೆ. ಇದರೊಂದಿಗೆ ನಮೋ ಆ್ಯಪ್‍ನಲ್ಲೂ ದೊರೆಯಲಿದೆ.

ಹೊಸ ವರ್ಷದ ಹೊಸ ಶಿಕ್ಷಣ ಮತ್ತು ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸಾಮ್ ವಾರಿಯರ್ಸ್ ಪುಸ್ತಕ ರಚಿಸಿದ್ದಾರೆ