ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ. 26 :- ಜೀವನದ ಜಂಜಾಟದಲ್ಲಿ ಬರುವ ಒತ್ತಡಗಳನ್ನು ಕಡಿಮೆ ಮಾಡಲು ಧ್ಯಾನ, ಯೋಗ ಹಾಗೂ ವ್ಯಾಯಾಮಗಳು ಮದ್ದಾಗಿವೆ ಎಂದು ಆರ್ಟ್ ಆಫ್ ಲಿವಿಂಗ್ ಆಶ್ರಮದ ರಾಮಕೃಷ್ಣ ಅವರು ತಿಳಿಸಿದರು.
ಅವರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆರ್ಟ್ ಆಫ್ ಲಿವಿಂಗ್, ಪತಂಜಲಿ ಯೋಗ ಸಮಿತಿ ಸೇರಿ ನಾನಾ ಸಂಘಟನೆಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಸುದರ್ಶನ ಕ್ರಿಯೆ ತರಬೇತಿ ಕಾರ್ಯಾಗಾರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡುತ್ತಾ ಸರಳ, ಲಯಬದ್ಧ ಹಾಗೂ ಶಕ್ತಿಯುತ ಉಸಿರಾಟ ಕ್ರಿಯೆ ನಡೆಯುವುದು ಆರೋಗ್ಯದ ಸೂತ್ರವಾಗಿದೆ ಹಾಗೂ ಧನಾತ್ಮಕ ಚಿಂತನೆಯನ್ನು ಮೂಡಿಸಲು ಸುದರ್ಶನ ಕ್ರಿಯೆ ಎಂಬುದು ಉತ್ತಮ ವಿಧಾನವಾಗಿದೆ. ಸದೃಢ ಆರೋಗ್ಯವನ್ನು ಹೊಂದಲು ಎಲ್ಲರೂ ಧ್ಯಾನ, ಯೋಗ, ವ್ಯಾಯಾಮದಂಥ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡಬೇಕು
ಆರ್ಟ್ ಆಫ್ ಲಿವಿಂಗ್ ಆಶ್ರಮದ ನೀರಜ್, ಸನತ್, ದೀಪಕ್ ಅವರು ಯೋಗಾಸನ, ಧ್ಯಾನ, ವ್ಯಾಯಾಮ ಹೇಳಿಕೊಡುವ ಮೂಲಕ ಆಧ್ಯಾತ್ಮಿಕ ಚಿಂತನೆಯ ಕುರಿತು ಉಪದೇಶಿಸಿದರು. ಈ ಸಂದರ್ಭದಲ್ಲಿ ಪತಂಜಲಿ ಮಹಿಳಾ ಜಿಲ್ಲಾ ಪ್ರಭಾರ ಬ್ಯಾಳಿ ಗೌರಮ್ಮ, ಡಾ ಗುರುರಾಜ, ಜೆಸಿಐ ಕೂಡ್ಲಿಗಿ ಗೋಲ್ಡನ್ ಸಂಸ್ಥೆಯ ಮಾಜಿ ಅಧ್ಯಕ್ಷ ನಾಗರಾಜ ಕೊಟ್ರಪ್ಪನವರ, ಹಾಲಿ ಅಧ್ಯಕ್ಷ ಅಕ್ಕಿ ಕೊಟ್ರೇಶ್, ಮಾಜಿ ಅಧ್ಯಕ್ಷ ಸಂದೀಪ್ ರಾಯಸಂ, ಪ್ರಭುರಾಜ, ಐಲಿ ರವಿಕುಮಾರ್, ಕೊಟ್ರೇಶ್ ಕುಶಾಲಶೆಟ್ಟಿ, ಸಿರಿಬಿ ಅಂಜಿನಪ್ಪ, ಕಂಡಕ್ಟರ್ ಸೋಮಣ್ಣ, ಸಂತೋಷ, ಕಾವಲಿ ರಾಘವೇಂದ್ರ ರವಿಅಂಗಡಿ, ಸೇರಿ ಪಟ್ಟಣದ ಇತರೆ ನಾಗರಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
One attachment • Scanned by Gmail