ಒತ್ತಡದ ನಡುವೆಯೂ ಇರಲಿ ಆರೋಗ್ಯ ಕಾಳಜಿ:ಗಣೇಶ್ ಹೆಗಡೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಅ.17: ಒತ್ತಡದ ಬದುಕಿನ ಹಿನ್ನೆಲೆಯಲ್ಲಿ ಆರೋಗ್ಯವನ್ನು ಎರಡನೇ ಆದ್ಯತೆಯಾಗಿ ಪರಿಗಣಿಸುತ್ತಿರುವದರಿಂದ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕು ಎಂದು ಬಿಎಂಎಂ ಇಸ್ಪಾತ್ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಗಣೇಶ್ ಹೆಗಡೆ ಸಲಹೆ ನೀಡಿದರು.
ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಹಾಗೂ ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,   ಒತ್ತಡದ ಬದುಕಿನಲ್ಲಿ ಆರೋಗ್ಯವನ್ನ ನಿರ್ಲಕ್ಷ್ಯ ಮಾಡಿಕೊಳ್ಳುತ್ತಿದ್ದೇವೆ. ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಲು ಇತಂಹ ಆರೋಗ್ಯ ಶಿಬಿರಗಳು ಸಹಕಾರಿಯಾಗಲಿವೆ ಎಂದರು.
ಜೀವ ಅಮೂಲ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ, ಹಣ ಹೇಗೆ ಬೇಕಾದರೂ ಸಂಪಾದನೆ ಮಾಡಬಹುದು. ಆದರೆ ಆರೋಗ್ಯ ಸಂಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಮಾಡಿದಾಗ ಅದರಲ್ಲಿ ಭಾಗವಹಸಿ ಆರೋಗ್ಯ ತಪಾಸಣೆ ಮಾಡಿಕೊಂಡಾಗ ನಮ್ಮಲ್ಲಿರುವ ಕಾಯಿಲೆಗಳು ಗೊತ್ತಾಗುತ್ತವೆ. ಇಂತಹ ಸಾಮಾಜಿಕ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ಹೊಸಪೇಟೆ ತಾ.ಪಂ ಇಒ ಉಮೇಶ್ ಮಾತನಾಡಿ, ಸರ್ಕಾರದಿಂದ ಸಾಕಷ್ಟ ಆರೋಗ್ಯ ಸೇವೆಗಳು ಲಭ್ಯವಿದ್ದು, ಅದರ ಸದುಪಯೋಗ ಪಡೆದುಕೊಳ್ಳಿಬೇಕು. ನಗರ ಪ್ರದೇಶಗಳಿಗೆ ಹೋಗಿ ಇಸಿಜಿ & ಎಕೋ ಸ್ಕ್ಯಾನ್ ಮಾಡಿಸಿಕೊಂಡರೆ 10 ರಿಂದ 15 ಸಾವಿರ ರೂ. ಖರ್ಚಾಗುತ್ತದೆ. ಗ್ರಾಮಸ್ಥರು ಶಿಬಿರದ  ಲಾಭವನ್ನು ಪಡೆಯಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪ್ರತ್ರಕರ್ತರ ಸಂಘದ ವಿಜಯನಗೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಯುವಜನರು ದುಶ್ಚಟಗಳಿಗೆ ದಾಸರಾಗದೇ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕೂಡ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಆಗಾಗ ಆರೋಗ್ಯ ತಪಾಸಣೆ ಒಳಪಡುವುದು ಸೂಕ್ತ ಎಂದರು.
ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್‍ನ ಹೃದಯ ತಜ್ಞ ಡಾ.ಗುರುರಾಜ್ ಮಾತನಾಡಿ, ನಿತ್ಯ ಮೂರರಿಂದ ನಾಲ್ಕು ಕಿ.ಮೀ ವಾಕಿಂಗ್ ಮಾಡಬೇಕು. ನಿಯಮಿತವಾಗಿ ವ್ಯಯಾಮ, ಹೆಚ್ಚಾಗಿ ನೀರು ಸೇವನೆ ಮಾಡಬೇಕು. ಹೃದಯಕ್ಕೆ ಸಂಬಂಧಿಸಿ ನೋವು, ಎದೆ ಭಾಗದಲ್ಲಿ ಚುಚ್ಚುವುದು ಗ್ಯಾಸ್ಟ್ರಿಕ್ ಸಮಸ್ಯೆ ಅಂತ ನಿರ್ಲಕ್ಷ್ಯ ಮಾಡದೇ ಕೂಡಲೇ ಹತ್ತಿರ ತಜ್ಞ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿ ರೋಗಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್‍ನ ಅಧ್ಯಕ್ಷ ಭೀಮರಾಜ, ಪ್ರಾಸ್ತವಿಕವಾಗಿ ಮಾತನಾಡಿದರು. ಒಟ್ಟು  130 ಹೆಚ್ಚು ಜನ ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ. ಅದರಲ್ಲಿ 12 ಜನರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್‍ಗೆ ಹೋಗುವಂತೆ ತಿಳಿಸಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬನಾಯಕ, ಜಿಲ್ಲಾ ಕಾರ್ಯದರ್ಶಿ ಕೆ.ಲಕ್ಷ್ಮಣ, ಟ್ರಸ್ಟ್ ಕಾರ್ಯದರ್ಶಿ ಯು.ಆರ್.ಉμÁ ಡಣಾಯಕನಕೆರೆ ಗ್ರಾ.ಪಂ ಅಧ್ಯಕ್ಷ ಚಿನ್ನಾಪ್ರಪ್ಪ, ಉಪಾಧ್ಯಕ್ಷೆ  ನೇತ್ರ ಸೂರ್ಯಪ್ರಕಾಶ್, ಪಿಡಿಒ ಜಿಲಾನ್ ಭಾಷ, ಸದಸ್ಯರಾದ ನಂದಿಬಂಡಿ ಗ್ರಾಮದ ಉಪ್ಪಾರ ಸೋಮಪ್ಪ, ಗುಂಡಾಸ್ವಾಮಿ, ಅಕ್ಕಮ್ಮ, ಉಪ್ಪಾರ ವೆಂಕಟೇಶ್, ಕುರುಬರ ರಮೇಶ್, ಲಕ್ಷ್ಮೀದೇವಿ ಆನಂದ, ರೇಣುಕಾ ಪರಶುರಾಮ, ಮುಖಂಡ ಕೃಷ್ಣನಾಯ್ಕ್, ಜಗದೀಶ್, ಮರಿಯಮ್ಮನಹಳ್ಳಿ ಆರೋಗ್ಯ ವೈದ್ಯಧಿಕಾರಿ ಡಾ.ಮಂಜುಳ, ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ಹಿರಿಯ ವ್ಯವಸ್ಥಾಪಕ ಪ್ರಸನ್ನಕುಮಾರ್ ಎಜಿ, ಗ್ರಾಮದ ಮುಖಂಡರಾದ ಉಪ್ಪಾರ ಶ್ಯಾವಪ್ಪ, ಹೆಗ್ಡಾಳ್ ಪಕ್ಕೀರಪ್ಪ, ಶಿವಾನಂದಯ್ಯ, ಹೊನ್ನಪ್ಪ, ವಿಷ್ಣುಸೇನಾ ಸಮಿತಿ ಅಧ್ಯಕ್ಷ ಯು ರಾಘವೇಂದ್ರ, ಯುವಕರಾದ ಅಶೋಕ, ಶರೀಫ್, ಯು ಹನುಮಂತ, ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಅಥಿತಿ ಶಿಕ್ಷಕಿ ಕುಮಾರಿ ರೇಖಾ, ಗ್ರಾಮಸ್ಥರು ಭಾಗವಹಿಸಿದ್ದರು.