ಒತ್ತಡದ ಜೀವನ ನಿವಾರಿಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ:ಕಡ್ಲಿಮಟ್ಟಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.13: ಇಂದಿನ ಒತ್ತಡದ ಜೀವನ ನಿವಾರಿಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆಎಂದು ಬಿ.ಎಲ್.ಡಿ.ಇ ಸಂಸ್ಥೆಯಎವಿಎಸ್. ಆಯುರ್ವೇದ ಮಹಾವಿದ್ಯಾಲ ಆಸ್ಪತ್ರೆ ಮತ್ತು ಸಂಶೋಧನೆಕೇಂದ್ರದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದ್ದಾರೆ.
76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ವಿಜಯಪುರ ಅಂತರ್ ಕಾಲೇಜು ದೇಶಭಕ್ತಿಗೀತೆ ಸ್ಪರ್ಧೆ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯ ಕ್ರಮಕ್ಕೆ ಚಾಲನೆ ನೀಡಿಅವರು ಮಾತನಾಡಿದರು.
ಸಂಗೀತಕ್ಕೆ ಮಾನಸಿಕ ಮತ್ತು ದೈಹಿಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಹೀಗಾಗಿ ಸಂಗೀತದ ಕಡೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಡಿ. ಎನ್. ಧರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸ್ಪರ್ಧೆಯಲ್ಲಿ ವೇದಾಂತ ಬಿಸಿಎ ಕಾಲೇಜಿನ ಸಾಕ್ಷಿ ಹಿರೇಮಠ ಪ್ರಥಮ, ರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಳವಿಕ ಜೋಶಿ, ದ್ವಿತೀಯ ಹಾಗೂ ಬಿ.ಎಲ್.ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಸುನಯನಾ ದೇಶಪಾಂಡೆ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿಗೌರವಿಸಲಾಯಿತು.
ಸಂಗೀತ ವಿದ್ವಾಂಸರಾದ ಮುತ್ತುರಾಜ ಮದನಭಾವಿ ಮತ್ತು ಸುನಂದಾಘಾಟಗೆ ನಿರ್ಣಾಯಕರಾಗಿ ಪಾಲ್ಗೋಂಡರು. ಸಹ ಕಾರ್ಯದರ್ಶಿ ಡಾ. ವಿಜಯಲಕ್ಷಿ, ವಿಧ್ಯಾರ್ಥಿ ಸಂಘದಅಧ್ಯಕ್ಷೆಡಾ. ಸೀತಾ ಬಿರಾದಾರ, ಸಾಂಸ್ಕøತಿಕ ವಿಭಾಗದ ಸಂಯೋಜಕಿ ಡಾ. ಸುಮಾ ಮತ್ತು ಡಾ. ದಾಮೋದರ ಉಪಸ್ಥಿತರಿದ್ದರು. ಡಾ. ಸುಮಾ ಕಗ್ಗೋಡ ವಂದಿಸಿದರು.
ಈ ಸ್ಪರ್ಧೆಯಲ್ಲಿ ನಗರದ 20ಕ್ಕೂ ಹೆಚ್ಚು ಮಹಾವಿದ್ಯಾಲಗಳ ಒಟ್ಟು 40 ಸ್ಪರ್ಧಾಳುಗಳು ಭಾಗವಹಿಸಿದ್ದರು.