ಒತ್ತಡದ ಕಾರ್ಯ ಮೌಲ್ಯಗಳಿಗೆ ಕುತ್ತು: ಮಲಕಾಜಪ್ಪ ಗುಂಡದ

ಕಲಬುರಗಿ:ಜೂ.13:ಮನುಷ್ಯನು ಒತ್ತಡ ಯುಗದಲ್ಲಿ ಬದುಕುತ್ತಾ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅತೃಪ್ತಿಯ ಜೀವನ ಸಾಗಿಸುತ್ತಿದ್ದಾನೆ ಎಂದು ಕುಷ್ಟರೋಗ ಕಾರ್ಯಾಲಯದ ಜಿಲ್ಲಾ ಹಿರಿಯ ಆರೋಗ್ಯ ಅಧಿಕಾರಿಗಳಾದ ಮಲಕಾಜಪ್ಪ ಗುಂಡದ ಹೇಳಿದರು.
ನಗರದ ಭವಾನಿ ನಗರದ ಬಬಲಾದ ಮಠದಲ್ಲಿ 162ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತ ಶಾರೀರಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಸದೃಢ ಹೊಂದಿದರೆ ಮಾತ್ರ ಆ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ. ಹಿಂದಿನ ಕಾಲದಲ್ಲಿ ಅಂಕಗಳಿಗಿಂತ ನೈತಿಕ ಮೌಲ್ಯಗಳಿಗೆ ಹೆಚ್ಚಿನ ಒತ್ತು ಕೊಟ್ಟು ಶಿಕ್ಷಣ ಕೊಡುತ್ತಿದ್ದರು ಹಾಗಾಗಿ ಸರ್ವರು ಅವಿಭಕ್ತ ಕುಟುಂಬದೊಂದಿಗೆ ಸಂತೃಪ್ತಿಯಿಂದ ಜೀವನ ಸಾಗಿಸುತ್ತಿದ್ದರು.
ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಅಂಕಗಳಿಗಾಗಿ ವಿದ್ಯಾಭ್ಯಾಸ ಮಾಡಿ ಹೆಚ್ಚು ಅಂಕ ಪಡೆದು ಸರಕಾರಿ ನೌಕರಿ ಪಡೆಯುವುದಕ್ಕೆ ಸೀಮಿತವಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಸಿವಿಲ್ ಇಂಜಿನಿಯರಾದ ರುದ್ರಮುನಿ ಜಿ. ಪುರಾಣಿಕ ಮಾತನಾಡಿದರು. ಕಾರ್ಯಕ್ರಮದ ನೇತೃತ್ವ ಶ್ರೀಮಠದ ಪೂಜ್ಯರಾದ ಗುರುಪಾದಲಿಂಗ ಮಹಾಸ್ವಾಮಿಗಳು ವಹಿಸಿದರು. ಕಾರ್ಯಕ್ರಮದಲ್ಲಿ ಸಂಗಮೇಶ ನಾಗೂರ, ಬಸವರಾಜ ಮುನ್ನೋಳಿ, ಗುರುರಾಜ ಹಸರರಗುಂಡಗಿ, ರವಿ ಮ್ಯಾಕ್ಸ್ ಲೊ ಟೈಲರ್, ರೇವಣಸಿದ್ದಯ್ಯ ಶಾಸ್ತ್ರಿ, ಶರಣು ಜವಳಗಾ, ಸಿದ್ದಣ್ಣವಾಡಿ, ಶರಣಪ್ಪ ಅಸ್ಟಗಿ, ಶಿವಶರಣಪ್ಪ ಮಾಲಿಪಾಟೀಲ, ಕು ಸಹನಾ, ವಿಶ್ವಜ್ಯೋತಿ, ಶಿವಕುಮಾರ ಸ್ಥಾವರ ಮಠ, ಮಂಜುನಾಥ ಅಟ್ಟೂರ, ಸೇರಿದಂತೆ ಅನೇಕ ಜನ ಭಾಗವಹಿಸಿದರು.