ಒತ್ತಡದಿಂದ ಹೊರ ಬರಲು ವಚನಗಳ ಮೊರೆ ಹೋಗಬೇಕು: ಭುಜಬಲಿ

ಕಲಬುರಗಿ,ನ.13: ಮಾನಸಿಕ ಒತ್ತಡದಿಂದ ಯಾರೂ ಸಾಯುವುದಿಲ್ಲ. ಮಾನಸಿಕ ಒತ್ತಡದ ಬಗ್ಗೆ ನಮಗೆ ತಪ್ಪು ಮಾಹಿತಿಯಿದೆ ಎಂದು ಬೆಂಗಳೂರಿನ ಮನೋತಜ್ಞ ಭುಜಬಲಿ ಬೋಗಾರ್ ಅವರು ತಿಳಿಸಿದರು.
ಲಿಂ. ಶರಣೆ ಪುಟ್ಟಮ್ಮ ಲಿಂ. ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ (ರಿ) ಮತ್ತು ಬಸವ ಬಳಗ (ರಿ) ದಾವಣಗೆರೆ ಹಾಗೂ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಅನುಭವ ಮಂಟಪದಲ್ಲಿ ಜರುಗಿದ ಶರಣತತ್ವ ಕಮ್ಮಟದಲ್ಲಿ ವಚನಗಳಲ್ಲಿ ಒತ್ತಡ ನಿರ್ವಹಣೆ ರಹಸ್ಯ ಕುರಿತು ಮಾತನಾಡಿದ ಅವರು, ವಚನಗಳಲ್ಲಿ ಒತ್ತಡ ನಿರ್ವಹಣೆಯ ಸಾಕಷ್ಟು ಅಂಶಗಳಿವೆ. ಅಕ್ಕನ ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ಎಂಬ ವಚನವು ಒತ್ತಡವು ಬಾಹ್ಯದಿಂದ ಬರುವಂತಹದ್ದಲ್ಲ. ಅದು ನಮ್ಮೊಳಗೆ ಸೃಷ್ಟಿಯಾಗುವಂತಿದೆ. ಮನದೊಳಗೆ ಸಮಾಧಾನಿಯಾಗುವ ಮೂಲಕ ಮಾನಸಿಕ ಧೈರ್ಯ ತಂದು ಕೊಡುವುದಾಗಿ ಎಂದು ಹೇಳಿದ್ದಾರೆ ಎಂದು ಪೆÇ್ರಜೆಕ್ಟ್‍ರ ಬಳಸಿ ತಿಳಿಸಿ ಹೇಳಿದರು.
ಬಸವಣ್ಣನವರ ಎನ್ನ ಚಿತ್ತವು ಹತ್ತಿಯ ಹಣ್ಣು, ಅಲ್ಲಮಪ್ರಭುವಿನ ಹೆಣ್ಣು ಮಾಹೆ ಎಂಬರು, ಕೊಟ್ಟ ಕುದುರೆಯನ್ನು ಏರಲರಿಯರು ವೀರರೂ ಅಲ್ಲ. ಧೀರರೂ ಅಲ್ಲ. ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗೆ ಉಂಟೆ? ಅಯ್ಯಾ ಎನ್ನುವ ಮಾರಯ್ಯ ದಂಪತಿಗಳ ಸಂಭಾಷಣೆಯಂತಿರುವ ಇನ್ನೂ ಅನೇಕ ವಚನಗಳು ಮನಸ್ಸನ್ನು ಪರಿಶುದ್ಧಗೊಳಿಸುತ್ತವೆ ಎಂದು ಅವರು ತಿಳಿಸಿದರು.
ಕೆಲಸ ಮಾಡಿದರೆ ಒತ್ತಡಕ್ಕೆ ಒಳಗಾಗುತ್ತೇವೆ. ಶರಣರು ಹೇಳಿದಂತೆ ಕಾಯಕವೇ ಕೈಲಾಸ ಪ್ರಾಪ್ತಿಯಾಗುತ್ತದೆ. ನಾವು ಏನು ಮಾಡುತ್ತೇವೆ ಅನ್ನುವುದು ಮುಖ್ಯವಲ್ಲ. ನಾವು ಹೇಗೆ ಮಾಡುತ್ತೇವೆ ಎನ್ನುವುದು ಮುಖ್ಯ. ಒಂದೊಂದು ವಚನಗಳಲ್ಲಿ ಕಿಚ್ಚು ಇದೆ. ಆ ಕಿಚ್ಚಿನ ಹುಚ್ಚು ಹಚ್ಚಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಸೊಲ್ಲಾಪುರ ಸಿಂಧೂತಾಯಿ ಕಾಡಾದಿ ಅವರು ಮಾತನಾಡಿದರು. ನೀಲಮ್ಮನ ಬಳಗದ ಜಯಶ್ರೀ ಚಟ್ನಳ್ಳಿ, ಅಂಬಾರಾಯ್ ಬಿರಾದಾರ್, ಬೈಲಹೊಂಗಲದ ಚನ್ನಪ್ಪ ನರಸಣ್ಣನವರ್, ಬಸವರಾಜ್ ಮೊರಬದ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ್ ಮಹಾಗಾಂವಕರ್ ಅವರು ಅಧ್ಯಕ್ಷತೆ ವಹಿಸಿದ್ದರು.
ವಿರೇಶ್ ಮಾಲಿಪಾಟೀಲ್, ಮಹಾಂತೇಶ್ ಕಲ್ಬುರ್ಗಿ, ನಾಗರಾಜ್ ಕಾಮಾ, ಬಸವಪ್ರಭು ಶಾಬಾದಿ, ಶಿವಾನಂದ್ ಮಠಪತಿ, ಶ್ರಾವಣಯೋಗಿ ಹಿರೇಮಠ್, ಶಿವಕುಮಾರ್ ಬಿದರಿ, ನಳಿನಿ ಮಹಾಗಾಂವಕರ್, ಆರ್.ಜಿ. ಶೆಟಗಾರ್ ಮುಂತಾದವರು ಭಾಗವಹಿಸಿದ್ದರು. ಬಸವಪ್ರಿಯೆ ಹಾಗೂ ಬಸವ ಗೌರಿ ಯಳವಂತಗಿ ಅವರಿಂದ ವಚನ ನೃತ್ಯ ಜರುಗಿತು. ನಂತರ ಜಗದ ಜಲಗಾರ್ ನಾಟಕ ಪ್ರದರ್ಶಿಸಲಾಯಿತು.