ಒತ್ತಡಗಳ ಮಧ್ಯಯೂ ಆರೋಗ್ಯ ಕಾಪಾಡಿಕೊಳ್ಳಲು ಕರೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ18 : ನಾವು ಎಷ್ಟೇ ಒತ್ತಡಗಳ ನಡುವೆ ಕಾರ್ಯನಿರ್ವಹಿಸಿದರೂ ನಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಅಗತ್ಯವಾಗಿದೆ ಎಂದು ದಂತವೈದ್ಯ ಡಾ.ರಾಘವೇಂದ್ರಕಟ್ಟಿ ಅಭಿಪ್ರಾಯಪಟ್ಟರು.
ಹೊಸಪೇಟೆಯ ವಿಜಯನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರಮೋದಿ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಭಿರದಲ್ಲಿ ಮಾತನಾಡಿದ ಅವರು ತಾಂತ್ರಿಕ ಬೆಳೆವಣಿಗೆಗಳು ನಮ್ಮ ಬದುಕನ್ನು ಒತ್ತಡಗಳಿಗೆ ಸಿಲುಕಿಸಿದೆ ಆದರೆ ಒತ್ತಡಗಳ ಮಧ್ಯಯೂ ನಾವು ನಮ್ಮ ಆರೋಗ್ಯದ ಕಡೆ ಗಮನಹರಿಸಬೇಕಾಗಿರುವುದು ಅಗತ್ಯವಾಗಿದೆ ನಿಯಮಿತವಾಗಿ ಆಹಾರ ಸೇವನೆ, ವಯಸ್ಸಿಗೆ ಅನುಗುಣವಾಗಿ ಆರೋಗ್ಯ ತಪಾಸಣೆ ಮಾಡುವುದು ಅನೇಕ ಆಪತ್ತುಗಳಿಂದ ಪಾರಾಗಲು ಸಹಕಾರಿಯಾಗಲಿವೆ ಎಂದರು.
ಅಂದಾಜು 150 ಪತ್ರಕರ್ತರು, ಪತ್ರಿಕಾ ವಿತರಕರು, ಪತ್ರಿಕಾ ಮಾಧ್ಯಮದ ಸಹಾಯಕ ಸಿಬ್ಬಂದಿ ಹಾಗೂ ಕುಟುಂಬಗಳಿಗೆ ಬಿಜೆಪಿ ಜಿಲ್ಲಾ ಘಟಕ ರಕ್ತ, ಬಿಪಿ, ನೇತ್ರ, ಸಾಮಾನ್ಯ ರೋಗಗಳ ತಪಾಸಣೆ ನಡೆಸುವ ಮೂಲಕ ವೈದ್ಯಕೀಯ ಚಿಕಿತ್ಸೆಗೆ ಅನುವು ಮಾಡಿಕೊಟ್ಟಿದ್ದರು.
ಖಾತ್ಯ ಕ್ಯಾನ್ಸರ್ ತಜ್ಞ ಡಾ.ಶಂಕರ, ಸ್ತ್ರೀರೋಗ ತಜ್ಞೆ ಡಾ.ತಸ್ಲ್ಲಮಾ, ದಂತ ವೈದ್ಯ ಡಾ.ಸ್ಪೂರ್ತಿ ಸೇರಿದಂತೆ ವೈದ್ಯಕೀಯ ಸಹ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಸಂಸದ ದೇವೆಂದ್ರಪ್ಪ, ಜಿಲ್ಲಾ ಉಸ್ತೂವಾರಿ ಸಚಿವೆ ಶಶಿಕಲಾ ಜೊಲ್ಲೆ, ಸತ್ಯನಾರಾಯಣ, ಅನುರಾಧ ಮಾಧ್ಯಮ ಸಂಚಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ವೈದ್ಯಕೀಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.