ಒಣಹಣ್ಣುಗಳ ಪಾಯಸ

ಬೇಕಾಗುವ ಸಾಮಾಗ್ರಿಗಳು
ಹಾಲು – 1 ಲೀಟರ್
ಒಣ ಬೆರ್ರಿ ಫ್ರೂಟ್‌ – 8
ಪಿಸ್ತಾ – 10
ಸಕ್ಕರೆ -೧ ಕಪ್
ಕೇಸರಿ – 6 ಎಳೆ
ಬಾದಾಮಿ – 7-8
ಒಣ ದ್ರಾಕ್ಷಿ – 10
ಏಪ್ರಿಕಾಟ್ – 5-6 (ಒಣಗಿದ)
ಏಲಕ್ಕಿ ಪುಡಿ – 1 ಟೀ ಸ್ಪೂನ್
ತುಪ್ಪ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ ಏಪ್ರಿಕಾಟ್, ಒಣದ್ರಾಕ್ಷಿ ಮತ್ತು ಒಣ ಬೆರ್ರಿ ಫ್ರೂಟ್‌ಗಳನ್ನು ಹಾಕಿ 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಪಾತ್ರೆಯಲ್ಲಿ ಹಾಲು ಹಾಕಿ ಕುದಿಸಿ. ಹಾಲನ್ನು 3-4 ನಿಮಿಷ ಕುದಿಸಿ ನಂತರ ಏಲಕ್ಕಿ ಪುಡಿ ಮತ್ತು ಕೇಸರಿ ಸೇರಿಸಿ. ಮತ್ತೆ, ಅದನ್ನು 5-6 ನಿಮಿಷ ಕುದಿಸಿ. ನೆನಸಿದ ಹಣ್ಣುಗಳನ್ನು ಸಣ್ಣದಾಗಿ ಕಟ್‌ ಮಾಡಿ ಹಾಲಿಗೆ ಸೇರಿಸಿ 5-6 ನಿಮಿಷ ಬೇಯಲು ಬಿಡಿ. ನಂತರ ಹಾಲಿಗೆ ಒಂದು ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಂತಿಮವಾಗಿ ಬಾದಾಮಿ ಮತ್ತು ಪಿಸ್ತಾ ಸೇರಿಸಿ ಮತ್ತು 3-4 ನಿಮಿಷ ಕುದಿಸಿ. ಈಗ ಪಾಯಸವನ್ನು ಬಟ್ಟಲಿಗೆ ಹಾಕಿ ಮೇಲೆ ಬಾದಾಮಿ, ತುಪ್ಪ ಹಾಕಿ ಸವಿಯಲು ಸಿದ್ಧ. ಪಾಯಸ ಉತ್ತಮ ಪರಿಮಳವನ್ನು ಪಡೆಯಲು ಅದನ್ನು ಕೆಲವು ಸಮಯ ಫ್ರಿಡ್ಜನಲ್ಲಿಟ್ಟರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ.