ಒಣಹಣ್ಣುಗಳ ಪಾಯಸ

ಬೇಕಾಗುವ ಸಾಮಾಗ್ರಿಗಳು
ಹಾಲು ೧ ಲೀಟರ್
ಒಣ ಬೆರ್ರಿ ಫ್ರೂಟ್ ? ೮
ಪಿಸ್ತಾ ೧೦
ಸಕ್ಕರೆ -೧ ಕಪ್
ಕೇಸರಿ ೬ ಎಳೆ
ಬಾದಾಮಿ ೭-೮
ಒಣ ದ್ರಾಕ್ಷಿ ೧೦
ಏಪ್ರಿಕಾಟ್ ೫-೬ (ಒಣಗಿದ)
ಏಲಕ್ಕಿ ಪುಡಿ ೧ ಟೀ ಸ್ಪೂನ್
ತುಪ್ಪ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ ಏಪ್ರಿಕಾಟ್, ಒಣದ್ರಾಕ್ಷಿ ಮತ್ತು ಒಣ ಬೆರ್ರಿ ಫ್ರೂಟ್‌ಗಳನ್ನು ಹಾಕಿ ೧೦ ನಿಮಿಷಗಳ ಕಾಲ ನೆನೆಸಿಡಿ. ನಂತರ ಪಾತ್ರೆಯಲ್ಲಿ ಹಾಲು ಹಾಕಿ ಕುದಿಸಿ. ಹಾಲನ್ನು ೩-೪ ನಿಮಿಷ ಕುದಿಸಿ ನಂತರ ಏಲಕ್ಕಿ ಪುಡಿ ಮತ್ತು ಕೇಸರಿ ಸೇರಿಸಿ. ಮತ್ತೆ, ಅದನ್ನು ೫-೬ ನಿಮಿಷ ಕುದಿಸಿ. ನೆನಸಿದ ಹಣ್ಣುಗಳನ್ನು ಸಣ್ಣದಾಗಿ ಕಟ್ ಮಾಡಿ ಹಾಲಿಗೆ ಸೇರಿಸಿ ೫-೬ ನಿಮಿಷ ಬೇಯಲು ಬಿಡಿ. ನಂತರ ಹಾಲಿಗೆ ಒಂದು ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಂತಿಮವಾಗಿ ಬಾದಾಮಿ ಮತ್ತು ಪಿಸ್ತಾ ಸೇರಿಸಿ ಮತ್ತು ೩-೪ ನಿಮಿಷ ಕುದಿಸಿ. ಈಗ ಪಾಯಸವನ್ನು ಬಟ್ಟಲಿಗೆ ಹಾಕಿ ಮೇಲೆ ಬಾದಾಮಿ, ತುಪ್ಪ ಹಾಕಿ ಸವಿಯಲು ಸಿದ್ಧ. ಪಾಯಸ ಉತ್ತಮ ಪರಿಮಳವನ್ನು ಪಡೆಯಲು ಅದನ್ನು ಕೆಲವು ಸಮಯ ಫ್ರಿಡ್ಜನಲ್ಲಿಟ್ಟರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ.