ಒಣಕೆಮ್ಮಿಗೆ ಮನೆಮದ್ದು

ಒಣ ಕೆಮ್ಮು ಕಾಣಿಸಿದಾಗ ಆಗಾಗ ಸ್ವಲ್ಪ-ಸ್ವಲ್ಪ ನೀರು ಕುಡಿಯಿರಿ. ಹೀಗೆ ಮಾಡಿದರೆ ಕೆಮ್ಮು ಬರುವುದನ್ನು ತಡೆಯಬಹುದು. ಗಂಟಲು ಒಣಗಲು ಬಿಡಬೇಡಿ. ಆಗಾಗ ನೀರನ್ನು ಕುಡಿಯುತ್ತಿದ್ದರೆ ಕ್ರಮೇಣ ಒಣ ಕೆಮ್ಮು ಕಮ್ಮಿಯಾಗುವುದು.

ಒಣ ಕೆಮ್ಮು ಹೋಗಲಾಡಿಸಲು ಕೆಲವೊಂದು ಹರ್ಬಲ್ ಟೀ ತುಂಬಾ ಸಹಾಯಕಾರಿ. ಶುಂಠಿ, ತುಳಸಿ ಈ ಅಂಶಗಳಿರುವ ಹರ್ಬಲ್ ಟೀ ತುಂಬಾ ಒಳ್ಳೆಯದು. ಈ ಟಿಪ್ಸ್ ಪಾಲಿಸಿದರೆ ಮಳೆಗಾಲದಲ್ಲಿ ಮೈ ತೂಕ ಹೆಚ್ಚಲ್ಲ ನಿಂಬೆ ಪಾನೀಯ ನಿಂಬೆ ಪಾನೀಯ ಮಾಡಿ ದಿನದಲ್ಲಿ ೩-೪ ಲೋಟ ಕುಡಿಯಿರಿ. ಈ ನಿಂಬೆ ಜ್ಯೂಸ್ ನಲ್ಲಿ ವಿಟಮಿನ್ ಸಿ ಅಧಿಕವಿದ್ದು ಒಣ ಕೆಮ್ಮಿನ ಸಮಸ್ಯೆಗೆ ಉತ್ತಮವಾದ ಮನೆಮದ್ದಾಗಿದೆ.

ಶುಂಠಿ ಕಷಾಯ ಮಾಡಿ ಕುಡಿಯುವುದು ಅಥವಾ ಶುಂಠಿ ರಸಕ್ಕೆ ಸ್ವಲ್ಪ ಜೇನು ಬೆರೆಸಿ ಸೇವಿಸುವುದು ಮಾಡುತ್ತಾ ಬಂದರೆ ಒಣ ಕೆಮ್ಮು ದೂರವಾಗುವುದು.

ಗಂಟಲು ಕೆರೆತ ಹೋಗಲಾಡಿಸಲು ಬಿಸಿ ನೀರಿಗೆ ಸ್ವಲ್ಪ ಆಪಲ್ ಸೈಡರ್ ವಿನಿಗರ್ ಹಾಕಿ ಬಾಯಿ ಮುಕ್ಕಳಿಸಿ. ಇದರಿಂದ ಗಂಟಲಿನ ಕೆರೆತ ತಡೆಯಬಹುದು.

ಉಪ್ಪನ್ನು ಬಿಸಿ ನೀರಿಗೆ ಹಾಕಿ ಮುಕ್ಕಳಿಸಿದರೆ ಗಂಟಲಿನ ಕೆರೆತ ಕಡಿಮೆಯಾಗುವುದು. ಅಲ್ಲದೆ ಈ ರೀತಿ ಮಾಡುವುದರಿಂದ ಗಂಟಲಿನ ನೋವನ್ನು ಕಡಿಮೆಯಾಗುವುದು.

ಚಕ್ಕೆಯನ್ನು ನೀರಿನಲ್ಲಿ ನೆನೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ಒಣ ಕೆಮ್ಮು ಕಡಿಮೆಯಾಗುವುದು.