ಒಡೆದ ಹಿಮ್ಮಡಿಗೆ ಮನೆ ಮದ್ದು

ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಅದಕ್ಕೆ ಅರಿಶಿನ ಬೆರೆಸಿ ಹಿಮ್ಮಡಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಲ್ಲಿ ಕಾಲನ್ನು ತೊಳೆದು ಒರೆಸಿದರೆ ಒಡೆದ ಹಿಮ್ಮಡಿ ಕ್ರಮೇಣವಾಗಿ ಮುಚ್ಚುತ್ತದೆ.
ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣು ಮತ್ತು ಬೆಣ್ಣೆ ಹಣ್ಣನ್ನು ಪೇಸ್ಟ್ ಮಾಡಿ ಹಿಮ್ಮಡಿಗೆ ದಪ್ಪವಾಗಿ ಲೇಪಿಸಿ ೧೫ ರಿಂದ ೨೦ ನಿಮಿಷಗಳು ಬಿಟ್ಟು ಕಾಲುಗಳನ್ನು ತೊಳೆದರೆ ಹಿಮ್ಮಡಿ ಸುಂದರವಾಗುತ್ತದೆ.
ಒಡೆದ ಹಿಮ್ಮಡಿಗಳನ್ನು ನೀರಲ್ಲಿ ತೊಳೆದು ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ೩೦ ನಿಮಿಷ ಆ ನೀರಲ್ಲಿ ಕಾಲುಗಳನ್ನು ಇಟ್ಟು ನಂತರ ಹಿಮ್ಮಡಿಗಳನ್ನು ಚೆನ್ನಾಗಿ ಒರೆಸಿ ನಂತರ ಜೇನುಮೇಣ ಹಚ್ಚಿದರೆ ಪ್ರಯೋಜನವಾಗುತ್ತದೆ.
ಒಡೆದ ಹಿಮ್ಮಡಿಯಲ್ಲಿ ನೋವು ಮತ್ತು ಉರಿ ಇದ್ದರೆ ಅರಿಶಿನ, ಜೇಷ್ಠಮಧು, ಬೇವಿನ ಎಲೆ ಮತ್ತು ಶ್ರೀಗಂಧದ ಪುಡಿಗಳನ್ನು ತುಪ್ಪದಲ್ಲಿ ಕಲಸಿ ಹಿಮ್ಮಡಿಗಳಿಗೆ ಪ್ಯಾಕ್ ಹಾಕಿದರೆ ಉರಿ ಮತ್ತು ನೋವು ಶಮನವಾಗುತ್ತದೆ.
ಒಟ್ಸ್ ಪುಡಿ ಮಾಡಿ ಅದಕ್ಕೆ ಆಲಿವ್ ಎಣ್ಣೆ ಬೆರೆಸಿ ಪೇಸ್ಟ್ ಮಾಡಿ ದಿನ ರಾತ್ರಿ ಒಡೆದ ಹಿಮ್ಮಡಿಗೆ ಹಚ್ಚಿದರೆ ಕ್ರಮೇಣವಾಗಿ ಹಿಮ್ಮಡಿ ಒಡಕು ಮುಚ್ಚಿ ಚರ್ಮ ಮೃದುವಾಗುತ್ತದೆ.
ಎಳ್ಳೆಣ್ಣೆಯನ್ನು ಬಿಸಿ ಮಾಡಿ ದಿನಕ್ಕೆ ೨ ಬಾರಿ ಒಡೆದ ಹಿಮ್ಮಡಿಗೆ ಮಸಾಜ್ ಮಾಡಬೇಕು.
ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಸಣ್ಣ ಟಬ್‌ನಲ್ಲಿ ಬಿಸಿ ನೀರು ಹಾಕಿ ಅದಕ್ಕೆ ಉಪ್ಪು ಬೆರೆಸಿ ೧೫ ನಿಮಿಷ ಎರಡು ಕಾಲುಗಳನ್ನು ಇಡಬೇಕು. ನಂತರ ಕಾಲುಗಳನ್ನು ಒರೆಸಿ ಆಲೋವೆರಾ ಜೆಲ್ ಹಚ್ಚಿ ಮಲಗಿದರೆ ಒಡೆದ ಚರ್ಮ ಬೇಗ ಕೂಡಿಕೊಳ್ಳುತ್ತದೆ.
ಒಡೆದ ಹಿಮ್ಮಡಿಗೆ ಅಳಲೆಕಾಯಿ ಪುಡಿಯನ್ನು ಹಸುವಿನ ತುಪ್ಪದಲ್ಲಿ ಕಲಸಿ ಹಚ್ಚಿದರೆ ಒಡೆದ ಚರ್ಮ ಮೃದುವಾಗಿ, ಉರಿ ಕಡಿಮೆಯಾಗಿ ಚರ್ಮ ಬೇಗ ಕೂಡಿಕೊಳ್ಳುತ್ತದೆ.