ಒಡಿಶಾ ವಿಧಾಸಭೆಗೂ ಬಿರುಸಿನ ಮತದಾನ

ಭುವನೇಶ್ವರ, ಜೂ. ೧- ಒಡಿಶಾದ ೬ ಲೋಕಸಭಾ ಕ್ಷೇತ್ರಗಳು ಮತ್ತು ೧೪೭ ವಿಧಾನಸಭಾ ಕ್ಷೇತ್ರಗಳ ಪೈಕಿ ಬಾಕಿ ಉಳಿದಿರುವ ೪೨ ಸ್ಥಾನಗಳಿಗೆ ಬಿರುಸಿನ ಮತದಾನ ನಡೆಯುತ್ತಿದೆ.
ಬಿರು ಬಿಸಿಲಿನಲ್ಲೂ ಮತದಾರರು ಮತಗಟ್ಟೆ ಕೇಂದ್ರದ ಬಳಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಅದರಲ್ಲೂ ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕ- ಯುವತಿಯರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ರಾಜ್ಯದಲ್ಲಿ ಏಕಕಾಲಕ್ಕೆ ನಡೆಯುತ್ತಿರುವ ೪ನೇ ಹಾಗೂ ಅಂತಿಮ ಸುತ್ತಿನ ಚುನಾವಣೆಯಲ್ಲಿ ೧೦,೮೮೨ ಮತಗಟ್ಟೆಗಳಲ್ಲಿ ೧ ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇದೇ ವೇಳೆ ೬ ಲೋಕಸಭಾ ಕ್ಷೇತ್ರಗಳಿಗೆ ೬೬ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ೪೨ ವಿಧಾನಸಭಾ ಕ್ಷೇತ್ರಗಳಲ್ಲಿ ೩೯೪ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಚುನಾವಣಾ ಕಣದಲ್ಲಿ ಸ್ಪೀಕರ್ ಪ್ರಮೀಳಾ ಮಲ್ಲಿಕ್, ಬಿಜೆಪಿ ನಾಯಕ ಮನಮೋಹನ್ ಸಮಲ್, ಸೇರಿದಂತೆ ಹಲವು ನಾಯಕರ ಭವಿಷ್ಯ ಇಂದು ವಿವಿಎಂ ನಲ್ಲಿ ಭದ್ರವಾಗಲಿದೆ.