ನವದೆಹಲಿ,ಜೂ.೧೫- ಒಡಿಶಾ ರೈಲು ಅಪಘಾತಕ್ಕೂ ವಾರದ ಮೊದಲು, ’ಶಾರ್ಟ್‌ಕಟ್ ಅಳವಡಿಸಿಕೊಳ್ಳಲು ಸಿಗ್ನಲಿಂಗ್ ಸಿಬ್ಬಂದಿ ಐದು ಬಾರಿ ಪ್ರಯತ್ನಿಸಿದ್ದರು ಎಂದು ರೈಲ್ವೆ ಮಂಡಳಿ ಕರ್ತವ್ಯ ಲೋಪದ ಬಹಿರಂಗಪಡಿಸಿದೆ.
ಏಪ್ರಿಲ್ ೩ ರಂದು ಪತ್ರದಲ್ಲಿ, ವಿವಿಧ ರೈಲ್ವೆ ವಲಯಗಳಿಂದ ಇಂತಹ ಐದು ಘಟನೆಗಳು ವರದಿಯಾಗಿವೆ .ಇದು ಆತಂಕಕಾರಿ ಎಂದು ಮಂಡಳಿ ತಿಳಿಸಿದೆ.
ಪಾಯಿಂಟ್‌ಗಳಲ್ಲಿ ಸರಿಯಾದ ಪರೀಕ್ಷೆಯಿಲ್ಲದೆ ನಿರ್ವಹಣಾ ಕೆಲಸದ ನಂತರ ಸಿಗ್ನಲಿಂಗ್ ಗೇರ್ ಅನ್ನು ಮರುಸಂಪರ್ಕಿಸಲು “ಶಾರ್ಟ್‌ಕಟ್ ಬಳಸಿದ್ದಕ್ಕಾಗಿ ಸಿಗ್ನಲಿಂಗ್ ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆ ರೈಲ್ವೆ ಮಂಡಳಿ ತಿಳಿಸಿದೆ.
ರೈಲ್ವೆ ಪಾಯಿಂಟ್‌ಗಳನ್ನು ಒಳಗೊಂಡಿರುವ ಅಸುರಕ್ಷಿತ ಭಾಗದಲ್ಲಿ ಐದು ಘಟನೆಗಳು ವಿವಿಧ ವಲಯ ರೈಲ್ವೇಗಳಲ್ಲಿ ನಡೆದಿವೆ,” ಈ ಘಟನೆಗಳು “ಆತಂಕಕಾರಿ ಮತ್ತು ಗಂಭೀರ ಕಾಳಜಿಯ ವಿಷಯ” ಎಂದು ಹೇಳಿದೆ.
“ಸ್ವಿಚ್,ಟರ್ನ್‌ಔಟ್ ಬದಲಿಗಾಗಿ ಬ್ಲಾಕ್‌ಗಳ ನಂತರ ಪಾಯಿಂಟ್‌ಗಳ ಸರಿಯಾದ ಪರೀಕ್ಷೆಯಿಲ್ಲದೆ ಸಿಗ್ನಲಿಂಗ್ ಗೇರ್‍ಗಳನ್ನು ಸಿಗ್ನಲ್ ಮತ್ತು ಟೆಲಿಕಾಂ ಸಿಬ್ಬಂದಿ ಮರುಸಂಪರ್ಕಿಸಿದ್ದಾರೆ, ಪೂರ್ವಸಿದ್ಧತಾ ಕಾರ್ಯಗಳ ಸಮಯದಲ್ಲಿ ತಪ್ಪು ವೈರಿಂಗ್, ಸಿಗ್ನಲ್ ವೈಫಲ್ಯಗಳನ್ನು ರೈಲ್ವೆ ಮಂಡಳಿ ಸಿಬ್ಬಂದಿಯ ಕರ್ತವ್ಯ ಲೋಪ ಎತ್ತಿ ತೋರಿಸಿದೆ,
ಸಿಗ್ನಲಿಂಗ್ ವಿಭಾಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಮಂಡಳಿಯು, ಈ ಘಟನೆಗಳು ಪುನರಾವರ್ತಿತ ಸೂಚನೆಗಳ ಹೊರತಾಗಿಯೂ, ಪರಿಸ್ಥಿತಿ ಸುಧಾರಿಸುತ್ತಿಲ್ಲ ಮತ್ತು ಸಿಗ್ನಲಿಂಗ್ ಸಿಬ್ಬಂದಿ ಶಾರ್ಟ್‌ಕಟ್ ವಿಧಾನ ಅನುಸರಿಸುವುದನ್ನು ಮುಂದುವರೆಸುತ್ತಿದ್ದಾರೆ” ಎಂದು ಅಸಮಾಧಾನ ಹೊರಹಾಕಿದೆ.
“ಇಂಜಿನಿಯರಿಂಗ್ ಸಿಬ್ಬಂದಿಗಳೊಂದಿಗೆ ಜಂಟಿ ಕೆಲಸಗಳು, ಸಿಗ್ನಲ್ ನಿರ್ವಹಣೆ ಮತ್ತು ಸಂಪರ್ಕ ಕಡಿತದ ಅಗತ್ಯವಿರುವ ಇತರ ದುರಸ್ತಿ ಕಾರ್ಯಗಳು ಎಂಜಿನಿಯರಿಂಗ್ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಸಿಗ್ನಲಿಂಗ್ ಗೇರ್‍ಗಳನ್ನು ಪರೀಕ್ಷಿಸಲು ಸಮಯದ ಗಡುವು ನೀಡಬೇಕು ಎಂದು ಸೂಚಿಸಿದೆ.