ನವದೆಹಲಿ,ಜೂ.೫- ಒಡಿಶಾದ ಬಾಲೋಸೋರ್ ಬಳಿ ಮೂರು ರೈಲು ಅಪಘಾತ ಸಂಭವಿಸಿ ೨೭೫ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಒಡಿಶಾದದಲ್ಲಿಂದು ಮತ್ತೊಂದು ಸರಕು ಸಾಕಾಣೆಯ ರೈಲು ಹಳಿ ತಪ್ಪಿದ ಘಟನೆ ನಡೆದಿದೆ.
ನಿನ್ನೆಯಷ್ಟೇ ತಮಿಳುನಾಡಿನಲ್ಲಿ ಅಳಿತಪ್ಪಿದ್ದನ್ನು ಗಮನಿಸಿ ಬಾರಿ ದುರಂತವನ್ನು ತಪ್ಪಿಸುವಲ್ಲಿ ರೈಲು ಸಿಬ್ಬಂದಿ ಯಶಸ್ವಿಯಾಗಿದ್ದರು. ಇಂದು ಒಡಿಶಾದಲ್ಲಿ ಮತ್ತೊಂದು ರೈಲು ಅಳಿ ತಪ್ಪಿದೆ.
ಬಾರ್ಗರ್ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಸುಣ್ಣದ ಕಲ್ಲು ಕಾಗಿಸುತ್ತಿದ್ದ ಸರಕು ಸಾಕಾಣೆಯ ಐದು ಬೋಗಿಗಳು ಹಳಿತಪ್ಪಿದ್ದು ಸರಕು ಸಾಕಾಣೆಯ ರೈಲಿನಲ್ಲಿ ಸುಣ್ಣದ ಕಲ್ಲು ಕೆಳೆಗೆ ಬಿದ್ದಿದೆ. ಅದೃಷ್ಠವಶಾತ್ ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ ಎಂದು ಭಾರತೀಯ ರೈಲು ಅಧಿಕಾರಿಗಳು ತಿಳಿಸಿದ್ದಾರೆ
ಒಡಿಶಾದ ಬಾಲಸೋರ್‌ನಲ್ಲಿ ೨೭೫ ಜನರ ಸಾವಿಗೆ ಕಾರಣವಾದ ಭೀಕರ ಮೂರು ರೈಲು ಅಪಘಾತದ ಮೂರು ದಿನಗಳ ನಂತರ, ಸುಣ್ಣದ ಕಲ್ಲು ಸಾಗಿಸುತ್ತಿದ್ದ ಮತ್ತೊಂದು ರೈಲು ಹಳಿ ತಪ್ಪಿದೆ. ಬಾಲಾಸೋರ್ ರೈಲು ದುರಂತ ನಡೆದ ಸ್ಥಳದಿಂದ ಸುಮಾರು ೫೦೦ ಕಿಮೀ ದೂರದಲ್ಲಿರುವ ಬರ್ಗಢ್ ಪ್ರದೇಶದಲ್ಲಿ ಹಳಿ ತಪ್ಪಿದೆ.ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಕೆಲವು ಬೋಗಿಗಳು ಮಾತ್ರ ಹಳಿತಪ್ಪಿವೆ ಎಂದು ವರದಿಯಾಗಿದೆ.
ತಪ್ಪಿದ ಮತ್ತೊಂದು ದುರಂತ
ಈ ನಡುವೆ ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್‌ನಲ್ಲಿ ತಮಿಳುನಾಡಿನ ಸೆಂಗೊಟ್ಟೈ ನಿಲ್ದಾಣಕ್ಕೆ ಪ್ರವೇಶಿಸುವ ವೇಳೆ ರೈಲ್ವೇ ಸಿಬ್ಬಂದಿ ರೈಲ್ವೆ ಸಿಬ್ಬಂದಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ರೈಲ್ವೆ ಸಿಬ್ಬಂಧಿ ನಿನ್ನೆ ಬಾರಿ ದುರಂತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ರೈಲ್ವೆ ಸಿಬ್ಬಂದಿ, ನಿನ್ನೆ ರೈಲು ಹಳಿಯ ಹಾನಿಯನ್ನು ಮಧ್ಯಾಹ್ನ ೩:೩೬ ಕ್ಕೆ ಹಾನಿ ಗಮನಿಸಿದ ನಂತರ, ತಕ್ಷಣವೇ ಕೋಚ್ ಅನ್ನು ಬೇರ್ಪಡಿಸಿ ಪ್ರಯಾಣಿಕರನ್ನು ಇತರ ಬೋಗಿಗಳಲ್ಲಿ ಇರಿಸಿತು. ಒಂದೂವರೆ ಗಂಟೆಗಳ ವಿಳಂಬದ ನಂತರ, ರೈಲು ಸಂಜೆ ೪:೪೦ ಕ್ಕೆ ಮಧುರೈಗೆ ಹೊರಟಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಬಿರುಕು ಪತ್ತೆ ಮಾಡಿದ ಸಿಬ್ಬಂದಿಯನ್ನು ಜಾಗರಣೆಗಾಗಿ ಶ್ಲಾಘಿಸಲಾಗುವುದು ಮತ್ತು ಮಧುರೈ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಇಂದು ಪ್ರಶಸ್ತಿಯನ್ನು ನೀಡಲಿದ್ದಾರೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.ನಿನ್ನೆ ಮಧ್ಯಾಹ್ನ ೩:೩೬ ಕ್ಕೆ ತಮಿಳುನಾಡಿನ ಸೆಂಗೊಟ್ಟೈ ನಿಲ್ದಾಣವನ್ನು ಪ್ರವೇಶಿಸುವಾಗ ರೈಲು ಸಂಖ್ಯೆ ೧೬೧೦೨ ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ನ ಎಸ್ ೩ ಕೋಚ್‌ನಲ್ಲಿ ಸಿ&ಡಬ್ಲ್ಯೂ ಸಿಬ್ಬಂದಿ ಬಿರುಕು ಬಿಟ್ಟಿದ್ದಾರೆ. ರೈಲ್ವೆ ಅಧಿಕಾರಿಗಳು ತಕ್ಷಣ ಕೋಚ್ ಅನ್ನು ಬೇರ್ಪಡಿಸಿ ಪ್ರಯಾಣಿಕರನ್ನು ಮತ್ತೊಂದು ರೈಲಿನಲ್ಲಿ ಕಳುಹಿಸಿದ್ದಾರೆಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಒಡಿಶಾದಲ್ಲಿ ಮತ್ತೊಂದು ಸರಕು ಸಾಗಾಣೆ ರೈಲು ತಪ್ಪಿದ ಹಳಿ
- ಬಾಲಾಸೋರು ದುರಂತದಿಂದ ೫೦೦ ಕೀ.ಮೀ ಪ್ರದೇಶದಲ್ಲಿ ದುರಂತ
- ಸುಣ್ಣದ ಕಲ್ಲು ಸಾಗಿಸುತ್ತಿದ್ದ ರೈಲು ಅಪಘಾತ
- ಯಾವುದೇ ಸಾವು ನೋವು ವರದಿಯಾಗಲಿಲ್ಲ
- ನಿನ್ನೆಯಷ್ಟೇ ತಮಿಳುನಾಡಿದಲ್ಲಿ ಸಿಬ್ಬಂದಿಯಿಂದ ತಪ್ಪಿದ ಅನಾಹುತ
- ರೈಲ್ವೆ ಅಧಿಕಾರಿಗಳು ನಿಟ್ಟಿಸಿರು