ಒಡಿಶಾದಲ್ಲಿ ೩ ಚಿನ್ನದ ಗಣಿ ಪತ್ತೆ

ಭುವನೇಶ್ವರ, ಫೆ.೨೮- ಒಡಿಶಾ ರಾಜ್ಯದ ಮೂರು ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಚಿನ್ನದ ಗಣಿಗಳು ಪತ್ತೆಯಾಗಿವೆ ಎಂದು ಉಕ್ಕಿನ ಮತ್ತು ಗಣಿಗಳು ಸಚಿವ ಪ್ರಫುಲ್ಲಾ ಮಲ್ಲಿಕ್ ತಿಳಿಸಿದ್ದಾರೆ.
ವಿಧಾನ ಸಭೆಯ ಪ್ರಶ್ನೋತ್ತರ ಕಲಾಪ ವೇಳೆ ಧೆಂಕನಾಲ್‌ನ ಶಾಸಕ ಸುಧೀರ್ ಕುಮಾರ್ ಸಮಲ್ ಅವರು ಕೇಳಿದ ಲಿಖಿತ ಪ್ರಶ್ನೆಗೆ ಅವರು ಉತ್ತರಿಸಿದರು.
ಭಾರತೀಯ ಗಣಿ ಮತ್ತು ಭೂವೈಜ್ಞಾನಿಕ ಸಮೀಕ್ಷೆಯ ನಿರ್ದೇಶನಾಲಯದ (ಜಿಎಸ್‌ಐ) ಸಮೀಕ್ಷೆಯು ದಿಯೋಗರ್, ಕಿಯೋಂಜಾರ್ ಮತ್ತು ಮಯೂರ್‌ಭಂಜ್ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪಗಳು ಇರುವುದು ಬಹಿರಂಗಪಡಿಸಿದೆ ಎಂದರು.
ಅದರಲ್ಲೂ ಕಿಯೋಂಜಾರ್ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ, ಮಯೂರ್ಭಂಜ್ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಮತ್ತು ದಿಯೋಗರ್ ಜಿಲ್ಲೆಯ ಒಂದು ಸ್ಥಳದಲ್ಲಿ ಈ ಚಿನ್ನದ ನಿಕ್ಷೇಪಗಳು ಕಂಡುಬಂದಿವೆ ಎಂದು ಮಾಹಿತಿ ನೀಡಿದರು.