ಒಡಿಶಾದಲ್ಲಿ ಕೊವಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಶೀಘ್ರ ಚಾಲನೆ

ಭುವನೇಶ್ವರ, ಅ ೨೬-ಒಡಿಶಾದ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್‌ಯುಎಂ ಆಸ್ಪತ್ರೆಯಲ್ಲಿ ದೇಶಿಯವಾಗಿ ಸಿದ್ಧಪಡಿಸಿರುವ ಕೊವಾಕ್ಸಿನ್ ಮೂರನೇ ಹಂತದ ಲಸಿಕೆ ಪ್ರಯೋಗ ಶೀಘ್ರದಲ್ಲೇ ಆರಂಭವಾಗಲಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೇಶಾದ್ಯಂತ ಆಯ್ಕೆ ಮಾಡಿದ ಪಟ್ಟಿಯಲ್ಲಿ ೨೧ವೈದ್ಯಕೀಯ ಸಂಸ್ಥೆಗಳ ಪಟ್ಟಿಯಲ್ಲಿ ಒಡಿಶಾ ರಾಜ್ಯವೂ ಒಂದಾಗಿದೆ.
ಇಲ್ಲಿ ಮೂರನೇ ಹಂತದ ಪ್ರಯೋಗ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೊವಾಕ್ಸಿನ್
ಸಂಸ್ಥೆಯ ಪ್ರಧಾನ ತನಿಖಾಧಿಕಾರಿ ಡಾ.ಇ.ವೆಂಕಟರಾವ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಮೂರನೇ ಹಂತದ ಕೊವಾಕ್ಸಿನ್ ಲಸಿಕೆಯ ಪ್ರಯೋಗ ನಡೆಸಲು ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ.
ಎರಡನೇ ಹಂತದಲ್ಲಿ ಪ್ರಯೋಗ ಪೂರ್ಣ ಗೊಂಡ ಬಳಿಕ ಸಾವಿರಾರು ಸ್ವಯಂ ಸೇವಕರನ್ನು ಒಳಗೊಂಡ ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ದೊಡ್ಡ ಪ್ರಯೋಗ ಇದಾಗಿದೆ ಎಂದು ಅವರು ಹೇಳಿದರು.
ವಯಸ್ಸಿನ ಮಿತಿ ಮತ್ತು ಮಾನದಂಡಗಳನ್ನು ಸಡಿಲಗೊಳಿಸಿ ಆರೋಗ್ಯವಂತರಾಗಿರುವ ಸ್ಬಯಂಸೇವಕರ ಮೇಲೆ ಪ್ರಯೋಗಿಸಲು ಮುಂದಾಗಿದೆ.
ಅರ್ಧದಷ್ಟು ಸ್ವಯಂಸೇವಕರಿಗೆ ಪ್ಲೇಸಬೊ ನೀಡಲಿದ್ದು ಮತ್ತು ಉಳಿದವರಿಗೆ ಕೊವಾಕ್ಸಿನ್ ನೀಡಲಾಗುವುದು ಎಂದು ತಿಳಿಸಿದರು.
ಕೊರೊನಾ ಸೋಂಕನ್ನು ತಡೆಯಲು ಎಷ್ಟು ಪರಿಣಾಮಕಾರಿಯಾಗಿ ಕೊವಾಕ್ಸಿನ್ ಕೆಲಸ ಮಾಡಲಿದೆ ಎಂಬುದನ್ನು ಅಧ್ಯಯನ ಮಾಡಲಾಗುವುದು ಎಂದರು.