ಒಡವೆ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ ಪೆÇಲೀಸರು

ಸಂಜೆವಾಣಿ ವಾರ್ತೆ
ಹುಣಸೂರು: ಮಾ.08:- ಕಳೆದುಕೊಂಡ ಚಿನ್ನದ ಬ್ರೆಸ್ಲೆಟ್ ಅನ್ನು ನಗರ ಠಾಣಾ ಪೆÇಲೀಸರು ಕೇವಲ ಎರಡು ಗಂಟೆ ಒಳಗೆ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಸ್ವಾಮಿ ಎಂಬುವವರು ನಗರದ ಪೃಥ್ವಿ ಜುವೆಲರ್ಸ್ ಮಳಿಗೆಯಲ್ಲಿ ಖರೀದಿಸಿದ ಸುಮಾರು 1.5 ಲಕ್ಷ ಮೌಲ್ಯದ ಒಡವೆಯನ್ನು ಆಕಸ್ಮಿಕವಾಗಿ ಕಳೆದುಕೊಂಡು, ಪೆÇಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ, ತುರ್ತು ಕ್ರಮಕೈಗೊಂಡ ನಗರ ಠಾಣೆ ಪೆÇಲೀಸರು ಕಳೆದು ಹೋದ ಒಡವೆ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ.
ಪತ್ತೆ ಕಾರ್ಯದಲ್ಲಿ ನೂತನ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ನೂತನ ಸಬ್ ಇನ್ಸ್ಪೆಕ್ಟರ್ ತಾಜುದ್ದೀನ್ ಎ.ಎಸ್. ಐ ಪುಟ್ಟನಾಯಕ, ಕಾನ್ಸ್ಟೇಬಲ್ ರಘು ಭಾಗವಹಿಸಿದರು.