ಒಡಲ ದನಿ ಪುಸ್ತಕ ಲೋಕಾರ್ಪಣೆ

ಮೈಸೂರು,ನ.22: ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ಸಹಯೋಗದಲ್ಲಿ ಒಡಲ ದನಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಂದು ಸಾಹೇಬ ಬರೆದಿರುವ ಒಡಲ ದನಿ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಹಿರಿಯ ಪತ್ರಕರ್ತ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ. ದೀಪಕ್ ಕೃತಿ ಬಿಡುಗಡೆ ಮಾಡಿದರು. ಸ್ನೇಹ, ಪ್ರೀತಿ, ದ್ವೇಷ, ಅಸೂಯೆ ಹಾಗೂ ಮೂಢನಂಬಿಕೆಗಳ ಕುರಿತಾದ ಒಡಲ ದನಿ ಕೃತಿ ಕುರಿತು ಪೆÇ್ರ. ಮಹೇಶ್ ಚಂದ್ರಗುರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಎಸ್, ಜಿಲ್ಲಾಪಂಚಾಯತ್ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವೈ. ಡಿ. ರಾಜಣ್ಣ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ ಸೇರಿದಂತೆ ಇನ್ನಿತರ ಗಣ್ಯರ ಉಪಸ್ಥಿತಿ