ಒಟಿಟಿಗೆ ಬಿಗ್‍ಬಾಸ್ ಕಿಚ್ಚನ ಹವಾ ಆರಂಭ

ಕಿಚ್ಚ ಸುದೀಪ್  ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಮೋಡಿ ಮಾಡಿದವರು. ಇದೀಗ ಕಿರುತೆರೆಯಿಂದ ಒಟಿಟಿಗೂ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಒಟಿಟಿಯಲ್ಲಿಯೂ ಹೊಸ ಹವಾ ಸೃಷ್ಠಿ ಮಾಡಲು ಮುಂದಾಗಿದ್ದಾರೆ.

ಕಿರುತೆರೆಯಲ್ಲಿ ಸುದೀಪ್ ನಡೆಸಿಕೊಡುವ ಬಿಗ್‍ಬಾಸ್ ರಿಯಾಲಿಟಿ ಶೋ, ಇದೀಗ ಇದೇ ಮೊದಲ ಬಾರಿಗೆ ಒಟಿಟಿಗೆ ದಾಪುಗಾಲು ಇರಿಸಿದೆ. ಹೀಗಾಗಿ ಒಂದಷ್ಟು ಕುತೂಹಲ ಹೆಚ್ಚಳಕ್ಕೂ ಕಾರಣವಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ನಟ,ನಿರೂಪಕ ಕಿಚ್ಚ ಸುದೀಪ್, ಕಿರುತೆರೆ ಅಥವಾ ಒಟಿಟಿ ಎನ್ನುವ ಯಾವುದೇ ವ್ಯತ್ಯಾಸ ತಮಗಿಲ್ಲ. ಒಂದೇ ವೇದಿಕೆಯಷ್ಟೇ. ನನ್ನ ಪಾತ್ರವನ್ನು ನಾನು ನಿಬಾಯಿಸುತ್ತೇನೆ. ಒಂದಷ್ಟು ಗ್ಯಾಪ್ ನಂತರ ಬಿಗ್ ಬಾಸ್ ಮರಳಿ ಬಂದಿದೆ, ಈ ಬಾರಿ ಒಟಿಟಿಯಲ್ಲಿ ಇದೇ 6ಮತ್ತು 7 ರಂದು ಗ್ರಾಂಡ್ ಎಂಟ್ರಿ ಕೊಡುತ್ತಿದ್ದು ಆ ನಂತರ ದಿನದ 24 ಗಂಟೆಗಳು ಪ್ರಸಾರ ಕಾಣಲಿದೆ.

ವಾರಾಂತ್ಯದಲ್ಲಿ ಯಥಾ ಪ್ರಕಾರ ಕಾಣಿಸಿಕೊಳ್ಳಲಿದ್ದು ಇದಕ್ಕಾಗಿ ತಾವು ಕೂಡ ಒಂದಷ್ಟು ಸಿದ್ದತೆ ಮಾಡಿಕೊಳ್ಳಬೇಕು.ಎಲ್ಲದಕ್ಕಿಂತ ಮಿಗಿಲಾಗಿ ಸ್ಪರ್ಧಿಗಳ ಜೊತೆ ಬೆರೆತು ನನ್ನ ಕಲಿಕೆಗೂ ಸಹಕಾರಿಯಾಗಿದೆ. ಕುತೂಹಲದಿಂದ ಸ್ಪರ್ಧಿಗಳನ್ನು ಭೇಟಿ ಮಾಡಲು ಕಾಯುತ್ತಿರುವ ಎನ್ನುವ ಮಾಹಿತಿ ಹಂಚಿಕೊಂಡರು ಸುದೀಪ್ ಕಾರ್ಯಕ್ರಮದ ನಿರ್ದೇಶಕ ಪರಮೇಶ್ ಗಂಡ್ಕಲ್,ಬಿಗ್ ಮಾಸ್ ಮನೆಯಲ್ಲಿ ನಡೆಯುವುದಕ್ಕೂ ಒಟಿಟಿಯಲ್ಲಿ ಪ್ರಸಾರವಾಗುವುದಕ್ಕೂ ಎರಡು ಮೂರು ನಿಮಿಷದ ಅಂತರವಿರತ್ತದೆ ಅಷ್ಟೇ. ನೇರ ಪ್ರಸಾರವಾಗಿಲಿದೆ ಒಟಿಟಿಯಲ್ಲಿ ಭಾಗವಹಿಸುವ ಒಂದಷ್ಟು ಮಂದಿಯನ್ನು ವಿಜೇತರನ್ನು ಆಯ್ಕೆ ಮಾಡಿಕೊಂಡು ಕಿರುತೆರೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್‍ಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.

ಒಟಿಟಿಯಲ್ಲಿ ಬಂದ ನಂತರ ಕಿರುತೆರೆಯಲ್ಲಿಯೂ ಬಿಗ್‍ಬಾಸ್ ಬರಲಿದೆ, ಅದೇ ಬೇರೆ ಇದೇ ಬೇರೆ ಎನ್ನುವ ಮಾಹಿತಿ ನೀಡಿದ ಅವರು, ಸ್ಪರ್ಧಿಗಳು ಹೇಗೆ ಮನೆಯಲ್ಲಿ ವರ್ತಿಸುತ್ತಾರೆ ಎನ್ನುವುದು ಎಲ್ಲರಿಗಿರುವ ಕುತೂಹಲ ಎಂದು ವಿವಿರ ನೀಡಿದರು.