ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು

ರಾಯಚೂರು- ಏ ೦೯
ವಿಧಾನಸಭಾ ಚುನಾವಣೆಗಾಗಿ ಎಲ್ಲಾ ಪಕ್ಷದವರು ಭರ್ಜರಿ ತಯಾರಿ ನಡೆಸಿದ್ದಾರೆ,ಸಿಂಧನೂರು ವಿಧಾನ ಸಭಾ ಕ್ಷೇತ್ರದ ಘಟಾನುಘಟಿ ಬಿಜೆಪಿ ನಾಯಕರುಗಳು ಇಂದು ಶ್ರೀಕ್ಷೇತ್ರ ಸಿದ್ದಪರ್ವತದ ಅಂಬಾಮಠದ ಅಂಬಾದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿಂಧನೂರು ಕ್ಷೇತ್ರಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ನಡುಕ ಹುಟ್ಟಿಸಿದೆ.
ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ಒಗ್ಗಟ್ಟು ಪ್ರದರ್ಶನ ನಡೆಸಿದ ನಾಯಕರುಗಳು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಾರಿದರು.
ಕೆಫೆಕ್ ನಿಗಮದ ಅಧ್ಯಕ್ಷ ಕೆ.ವಿರುಪಾಕ್ಷಪ್ಪ, ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ್ ಆಚಾರ್ಯ, ಮುಖಂಡರಾದ ಕೆ.ಕರಿಯಪ್ಪ, ನಗರ ಯೋಜನಾ ಪ್ರಧಿಕಾರದ ಮಾಜಿ ಅಧ್ಯಕ್ಷ ಅಮರೇಗೌಡ ವಿರುಪಾಪೂರು,ಜಿ.ಪಂನ ಮಾಜಿ ಸದಸ್ಯ ಎನ್.ಶಿವನಗೌಡ ಸೇರಿದಂತೆ ಅನೇಕ ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಿ ಅಂಬಾದೇವಿಗೆ ಪೂಜೆ ನೆರವೇರಿಸಿದರು.
ಇನ್ಮುಂದೆ ಸಿಂಧನೂರು ಕ್ಷೇತ್ರಕ್ಕೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಆಕಾಂಕ್ಷಿಗಳಾದ ಕೆ.ಕರಿಯಪ್ಪ ಅವರು ಪಕ್ಷಕ್ಕೆ ಸೇರ್ಪಡೆ ನಂತರ ಪಕ್ಷ ಮತ್ತಷ್ಟು ಬಲಿಷ್ಠಗೊಂಡಿದ್ದು ಗೆಲ್ಲುವ ಕ್ಷೇತ್ರವಾಗಿ ಮಾರ್ಪಾಡು ಆಗಿದೆ. ಈ ಹಿನ್ನೆಲೆ ಈ ನಾಯಕರುಗಳು ಒಗ್ಗಟ್ಟು ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತಂದಿದ್ದು ಸುಳ್ಳಲ್ಲ. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಕ್ಕುಂದಿ ಶರಣಪ್ಪ ಗೌಡ, ನರಸಿಂಹರಾವ್ ಕುಲಕರ್ಣಿ, ಸಿಂಧನೂರು ವಿಧಾನಸಭಾ ಉಸ್ತುವಾರಿ ಶ್ರೀಮತಿ ಆದಿಮನಿ ವೀರಲಕ್ಷ್ಮೀ, ಮುಖಂಡರಾದ ರಾಜೇಶ ಹೀರೆಮಠ , ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲುಗುಂದ, ನಗರ ಮಂಡಲ ಅಧ್ಯಕ್ಷರಾದ ನಿರುಪಾದಪ್ಪ ಜೋಳದರಾಶಿ, ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಹಾರಪುರ, ಹನುಮಂತ ರೆಡ್ಡಿ ಹುಡಾ, ಮಂಜುನಾಥ್ ಹರಸೂರು ಪ್ರೇಮ ಸಿದ್ಧಾಂತಿಮಠ, ಶೈಲಜಾ ಷಡಕ್ಷರಪ್ಪ, ಮಮತಾ ಹಿರೇಮಠ,ವೆಂಕೋಬಣ್ಣ ಕಾರ್ಲಕುಂಟಿ, ಸೋಮಣ್ಣ ವಿಶ್ವಕರ್ಮ, ಟಿ. ಸುಬ್ಬಾರಾವ್, ಶಿವಬಸನಗೌಡ ಗೊರೆಬಾಳ, ತಿಮ್ಮಾರೆಡ್ಡಿ ಹುಡ,ಜಡಿಯಪ್ಪ ಹೂಗಾರ್, ಮಲ್ಲಿಕಾರ್ಜುನ್ ಜೀನೂರ್,ಸಿದ್ದು ಹೂಗಾರ್, ರವಿ ಉಪ್ಪಾರ್, ಪಂಪಾಪತಿ ನಾಯಕ,ನೀಲಮ್ಮ, ಜಯಶ್ರೀ ರೆಡ್ಡಿ , ಹಾಗೂ ಪದಾಧಿಕಾರಿಗಳು, ಎಲ್ಲಾ ಮೋರ್ಚಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ನಾಮ ನಿರ್ದೇಶಿತ ಸದಸ್ಯರು, ಮತ್ತು ಕಾರ್ಯಕರ್ತ ಭಾಗವಹಿಸಿದ್ದರು.