ಒಗ್ಗಟ್ಟಿನ ಹೋರಾಟದಿಂದ ಮೀಸಲಾತಿ ಸಾಧ್ಯ: ಹೊರಟ್ಟಿ

ಹುಬ್ಬಳ್ಳಿ,ಏ19: ಸಮಾಜದ ಸರ್ವರೂ ತಮ್ಮ ತಮ್ಮಲ್ಲಿನ ಬೇಧ ಬಾವ ಮರೆತು ಒಕ್ಕೂರಲಿನಿಂದ ಹೋರಾಡಿದರೆ ಪಂಚಮಸಾಲಿ ಜನಾಂಗಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ತಮ್ಮ ನಿವಾಸದಲ್ಲಿ ಅಖಿಲ ಭಾರತ್ ಲಿಂಗಾಯತ್ ಪಂಚಮಸಾಲಿ ಸಮಾಜ ಟ್ರಸ್ಟ್‍ನ ಜಿಲ್ಲಾ ಘಟಕದ ಆಶ್ರಯದಲ್ಲಿ ಸನ್ಮಾನಸ್ವೀಕರಿಸಿ ಮಾತನಾಡಿದ ಅವರು ಪಂಚಮಸಾಲಿ ಜನಾಂಗಕ್ಕೆ 2ಎ ಮೀಸಲಾತಿಗಾಗಿ ಬೇಡಿಕೆ ಇಟ್ಟು ಹೋರಾಟ ನಡೆಸಿರುವುದು ಸಮರ್ಥನೀಯವಾಗಿದೆ. ಆದರೆ ಈ ದಿಸೆಯಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು ಅತೀ ಮುಖ್ಯವಾಗಿದೆ ಎಂದರು.
ಸಮಾಜದವರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತಿತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಅನುಕೂಲ ಕಲ್ಪಿಸುವ 2ಎ ಮೀಸಲಾತಿ ನೀಡುವುದು ಸರ್ವರೀತಿಯಿಂದಲೂ ಉಚಿತ ಎಂದು ಹೊರಟ್ಟಿ ಅವರು ಅಭಿಪ್ರಾಯಪಟ್ಟರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಪ್ರಭಣ್ಣಾ ಹುಣಸಿನಕಟ್ಟಿ, ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ, ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ಗುರುರಾಜ ಹೂಗಾರ , ಜಿಲ್ಲಾಧ್ಯಕ್ಷ ಕಲ್ಲಪ್ಪಾ ಯಲಿವಾಳ,ತಾಲೂಕಾ ಅಧ್ಯಕ್ಷ ನಂದಕುಮಾರ ಪಾಟೀಲ, ಧರ್ಮದರ್ಶಿ ನಾಗರಾಜ ಪಟ್ಟಣಶೆಟ್ಟಿ, ಎಮ್.ಎಸ್.ಮಲ್ಲಾಪೂರ, ಮೈಲಾರಿ ಧಾರವಾಡ, ಕುಮಾರ ಕುಂದನಹಳ್ಳಿ, ಪ್ರಕಾಶ ಬೆಂಡಿಗೇರಿ, ಗಿರೀಶ ಸುಂಕದ, ಡಾ. ಎಚ್.ವ್ಹಿ. ಬೆಳಗಲಿ, ಡಾ.ಮಹೇಶ ಹೊರಕೇರಿ, ಕುಮಾರಗೌಡ ಪಾಟೀಲ, ವಿಶ್ವನಾಥ ಹಿರೇಗೌಡ, ಡಾ. ಮಹೇಶ ಹೊರಕೇರಿ, ವಿನಯ ಪಟ್ಟಣಶೆಟ್ಟಿ, ರವಿ ಸಿನ್ನೂರ, ಡಾ. ರಾಮು ಮೂಲಗಿ, ಎಮ್.ಡಿ.ಮೆಣಸಿನಕಾಯಿ, ಬಿ.ಎಸ್.ಬಿರಾದಾರ, ರವಿ ಹೊಸೂರ,ಶರಣಪ್ಪಾ ಜನಗಣ್ಣವರ ಈ ಸಂದರ್ಭದಲ್ಲಿದ್ದರು.