ಒಗ್ಗಟ್ಟಿನ ಮಂತ್ರ ಜಪಿಸಿದ ಜೆಡಿಎಸ್‍ಗೆ ಬಿಜೆಪಿ ಸಾಥ್

ಸಂಜೆವಾಣಿ ನ್ಯೂಸ್
ಮೈಸೂರು: ಮಾ.28:- ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಸ್ವತಃ ಎರಡು ಪಕ್ಷ ಅಧ್ಯಕ್ಷರೇ ಅಖಾಢಕ್ಕಳಿದು ಮೈತ್ರಿ ಸಂದೇಶ ರವಾನಿಸಿದರೆ, ಮತ್ತೊಂದೆಡೆ ಜಿಲ್ಲೆಯ ಮೈತ್ರಿ ಪಕ್ಷದ ಸಾರಥ್ಯ ಹೊತ್ತಿರುವ ಶಾಸಕ ಜಿ.ಟಿ.ದೇವೇಗೌಡ ಈ ಮೈತ್ರಿ ಮುಂದೆಯೂ ಗಟ್ಟಿಯಾಗಿ ನಿಲ್ಲುತ್ತೇ, ದೇಶಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣವೆಂದರು.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಹಾಲಿ ಹಾಗೂ ಮಾಜಿ ಶಾಸಕರು, ನಗರ, ಜಿಲ್ಲಾ ಹಾಗೂ ಬ್ಲಾಕ್ ಮುಖಂಡರ ಮೈತ್ರಿ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜಂಟಿಯಾಗಿ ಕಾಣಿಸಿಕೊಂಡು ಸಭೆ ನಡೆಸಿ ಮೈತ್ರಿ ಸಂದೇಶ ಸಾರಿದರು. ಈ ವೇಳೆ ಮೈತ್ರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲೆಯ ಮೈತ್ರಿ ಅಭ್ಯರ್ಥಿಯ ಸಾರಥ್ಯವಹಿಸಿರುವ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಮ್ಮಲ್ಲಿ ಇಂದಿಗೂ ಪರಸ್ಪರ ಮಾತನಾಡದ ಸ್ಥಿತಿಯಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರಿದ್ದೇವೆ. ಆದರೆ, ಭಾರತ ದೇಶದ ಭದ್ರತೆ ಮುಖ್ಯವಾಗಿದೆ. ಬೇರೆ ಬೇರೆ ದೇಶದಲ್ಲಿ ಕೋಮು-ಗಲಭೆ ಹೆಚ್ಚಾಗಿದೆ. ಆದರೆ, ನಮ್ಮಲ್ಲಿ ಅಲ್ಪಸಂಖ್ಯಾತರು ಸಹ ನೆಮ್ಮದಿಯಾಗಿ ಇರುವ ದೇಶ ಯಾವುದಾದರೂ ಇದ್ದರೆ ಅದು ನಮ್ಮ ದೇಶ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣರಾಗಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಟೀಕೆ ನಿಲ್ಲಲ್ಲಿ:
ಬಿಜೆಪಿ ಜತೆಗೆ ಸೇರಿದ ಜೆಡಿಎಸ್ ಮುಳುಗೇ ಹೋಯಿತು. ಅಸ್ತಿತ್ವವೇ ಇಲ್ಲ ಎಂದು ಕಾಂಗ್ರೆಸ್ ಹೇಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಇಂದಿಗೂ ಶೇ.23 ರಷ್ಟು ಮತಗಳ ಜೆಡಿಎಸ್‍ಗೂ ಬಂದಿದೆ. ಪರಿಸ್ಥಿತಿ ಹೀಗಿರುವಾಗ ದೇಶದಲ್ಲಿಯೂ ಪಕ್ಷ ವಿಸ್ತರಿಸುವ ಆಲೋಚನೆ ಪಕ್ಷದಲ್ಲಿ ಇದೆ. ಹೀಗಿರುವಾಗ ದೇವೇಗೌಡರು ದೇಶ ಉಳಿಯುವಲ್ಲಿ ಬಿಜೆಪಿ ಉಳಿಸಿಕೊಳ್ಳಬೇಕೆಂದು ಮೈತ್ರಿ ಆಗಿದ್ದಾರೆ. ಕಾಂಗ್ರೆಸೇತರ ಪಕ್ಷಗಳು ಒಗ್ಗಾಟ್ಟಾಗಿ ನರೇಂದ್ರ ಮೋದಿಯವರನ್ನು ಉಳಿಸಿಕೊಳ್ಳಲು ಈ ಮೈತ್ರಿ ಆಗಿದೆ. ಕಾಂಗ್ರೆಸ್ ಜೆಡಿಎಸ್ ಅನ್ನು ಟೀಕಿಸುವುದು ನಿಲ್ಲಿಸಬೇಕು. ಹಿಂದೆ ಎರಡು ಕ್ಷೇತ್ರ ಗೆದ್ದಿಯೂ ದೇಶ ಆಳಿದ್ದೇವೆ. ನಾಲ್ಕೈದು ಕ್ಷೇತ್ರ ಇದ್ದ ಬಿಜೆಪಿ ಈಗ ದೇಶ ಆಳುತ್ತಿದೆ. ಹೀಗಿರುವಾಗ 130 ಕ್ಷೇತ್ರ ಗೆದ್ದಿದ್ದೇವೆಂದು ದುರಂಹಕಾರದಲ್ಲಿ ಜೆಡಿಎಸ್ ಬಗ್ಗೆ ಮಾತನಾಡುವುದು ಬಿಡಿ ಎಂದು ಆಗ್ರಹಿಸುತ್ತೇವೆ. ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಪಕ್ಷಾತೀತವಾಗಿ ಆಗಿದೆ. ಸ್ಪರ್ಧೆ ಮಾಡಿದ್ದ ಎಲ್ಲರೂ ಒಟ್ಟಾಗಿ ಸೇರಬೇಕಿದೆ. ನಾವೂ ಯಾಕೆ ಒಂದಾಗಲೇ ಬೇಕು. ಇದು ಪ್ರಾರಂಭ ಇದು ಗಟ್ಟಿಯಾಗಬೇಕು. ಇದು ಪ್ರಯೋಗ ಎಂದು ತಿಳಿದಿದ್ದಾರೆ. ಮೂರನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಾಪಾಸ್ ಬಂದಿದ್ದಾರೆ. ಮೂರು ದಿನದಿಂದ ಮೂರು ಕ್ಷೇತ್ರ ಮಾತ್ರವಲ್ಲ, ಎಲ್ಲಾ ಕ್ಷೇತ್ರದ ಮುಖಂಡರನ್ನು ಕರೆತಂದು ನಿರಂತರವಾಗಿ ಒಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಅನ್ನು ಮುಗಿಸಿದ್ದಾರೆ ಎಂದು ಹೇಳಿದರು. ದಕ್ಷಿಣ ಕರ್ನಾಟಕದ ಜೆಡಿಎಸ್ ಶಕ್ತಿಯನ್ನು ಬಿಜೆಪಿ ಸೋಲಿಸಿದ ನೋವಿದೆ. ಆದರೆ, ನಾವು- ನೀವು ಉಳಿಯಬೇಕು. ಈ ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ 28ಕ್ಕೆ 28ಅನ್ನು ಗೆಲ್ಲಿಸೋಣ ಎಂದರು.
ನೀವಿಬ್ಬರೂ ಒಮ್ಮೆ ಇಲ್ಲಿ ಕುಳಿತು ಇಬ್ಬರೂ ಪಕ್ಷದ ಕಾರ್ಯಕರ್ತರಿಗೆ ಒಂದು ಸಂದೇಶ ಕೊಡಬೇಕಿದೆ. ರಾಷ್ಟ, ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮೈಸೂರಿನಿಂದಲೇ ಎಲ್ಲವೂ ಪ್ರಾರಂಭ ಆಗಲಿದೆ. ಇದನ್ನು ಆರು ತಿಂಗಳಿಂದ ಹೇಳಿಕೊಂಡೆ ಬಂದಿದ್ದೇವೆ. ಕುಮಾರಸ್ವಾಮಿ, ದೇವೇಗೌಡರು ಹಾಗೂ ಮೋದಿ, ಅಮಿತ್ ಶಾ ಅವರು ಮಾತನಾಡಿದ್ದರು. ಯಾವುದೇ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಬಗ್ಗೆ ಒಂದು ಚಕಾರ ಎತ್ತಂದೆ ನೋಡಿಕೊಂಡಿದ್ದೇವೆ. ವಿಧಾನ ಪರಿಷತ್ ನಲ್ಲಿ ಎನೂ ಮಾಡಬೇಕೆಂಬ ತೀರ್ಮಾನ ಸಹ ಮಾಡಲಾಗಿದೆ. ಪ್ರತಾಪಸಿಂಹ 10 ವರ್ಷ ಅಭಿವೃದ್ಧಿ ಮಾಡಿದ್ದು ಮತ್ತೆ ಬರುತ್ತಾರೆ ಎಂದು ಹೇಳಿದ್ದೇವು ಅಂತೆಯೇ ಬಂದರೆಂದರು.
ನಾಳೆಯಿಂದ ನಡೆಯಲಿ ಮೈತ್ರಿ ಪ್ರಚಾರ:
ನಾಳೆಯಿಂದ ಪಿರಿಯಾಪಟ್ಟಣ, ಕೊಡಗು, ಹುಣಸೂರು, ಎಲ್ಲಾ ಕಡೆ ಎರಡು ಧ್ವಜ ಹಾಕುವ ಕೆಲಸ ಮಾಡಿ. ನಾವು ನಮ್ಮ ಪಕ್ಷ ಉಳಿಯಬೇಕು. ಬಿಜೆಪಿಯೂ ಉಳಿಯಬೇಕು. ನಾವೆಲ್ಲರೂ ಮುಂದೆ ಗಟ್ಟಿಯಾಗಿ ಹೋರಾಟ ಮಾಡಿ ರಾಜ್ಯ ಉಳಿಸಬೇಕಿದೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಅವಧಿಯ 20 ತಿಂಗಳ ಆಡಳಿತವನ್ನು ಇಂದಿಗೂ ಜನ ನೆಚ್ಚಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ವಿರೋಧ ಪಕ್ಷದ ಸರ್ಕಾರ ಎಂಬುದು ಗೊತ್ತಾಗಿದೆ. ನೀರು ಕೊಡದೇ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಕರೆದರೂ ಒಬ್ಬ ಶಾಸಕರೂ ಹೋಗಿಲ್ಲ. ಎಷ್ಟು ಗಟ್ಟಿಯಾಗಿ ಪಕ್ಷದಲ್ಲಿ ಇದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವೀಲ್‍ಚೇರ್‍ನಲ್ಲಿ ಪ್ರಚಾರಕ್ಕೆ ಬರುತ್ತೇನೆ, ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಆಗಬೇಕು ಎನ್ನುತ್ತಿದ್ದಾರೆ. ರಾಜಮನೆತನದ ಕೊಡುಗೆ ಎನೂ ಎಂಬುದು ಗೊತ್ತಿದೆ. ಪ್ರತಿ ಸಭೆಯಲ್ಲೂ ಸಂವಿಧಾನ ದಿನ ಓದುವವರು ಯಾರು ಎಷ್ಟು ಬಾರಿ ಸಂವಿಧಾನ ಬದಲಾವಣೆ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಯಧುವೀರ ಗೆಲುವಿಗೆ ಪಣ ತೊಡಬೇಕಿದೆ. ಜೆಡಿಎಸ್‍ನಲ್ಲಿ ಯಾವೊಬ್ಬ ನಾಯಕರು ಹೆಸರು ಕೆಡಿಸಿಕೊಂಡವರಿಲ್ಲ. ಚುನಾವಣೆ ಎದುರಿಸಿ ಸಾಲಗರರಾಗಿದ್ದೀವಿ ಎಂದು ತಿಳಿಸಿದರು.
10ರೂಪಾಯಿಯೂ ಬಂದಿಲ್ಲ: ಕಾಂಗ್ರೆಸ್ ಸರ್ಕಾರ ಯಾರಿಗೂ 10 ರೂಪಾಯಿ ಅನುದಾನ ಕೊಟ್ಟಿಲ್ಲ. 50ಲಕ್ಷ ಶಾಸಕರ ಅನುದಾನ ಕೊಟ್ಟಿದ್ದಾರೆ. ಹೊಸ ಬೋರ್ ವೆಲ್ ಕೊರೆಯಲು ಆಗುತ್ತಿಲ್ಲ. ಕುಡಿಯಲು ನೀರು ಕೊಡದೇ ಸತಾಯಿಸುತ್ತಿದ್ದಾರೆ. ಈ ಬಾರಿ ಬಿಜೆಪಿ 28ಕ್ಷೇತ್ರ ಗೆದ್ದರೆ ಕರ್ನಾಟಕ ಅಂದ್ರೆ ನರೇಂದ್ರ ಮೋದಿ ಅವರು ಎಂಬಂತೆ ಆಗಲಿದೆ ಎಂದು ಹೇಳಿದರು. ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಯಧುವೀರ ಕೃಷ್ಣದತ್ತಚಾಮರಾಜ ಒಡೆಯರ್, ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಬಾಲರಾಜ್, ಮಾಜಿ ಸಚಿವ ಅಶ್ವಥ್‍ನಾರಾಯಣ್, ಸಾ.ರಾ.ಮಹೇಶ್, ಶಾಸಕರಾದ ಸಿ.ಎನ್.ಮಂಜೇಗೌಡ, ಶ್ರೀವತ್ಸ, ಹರೀಶ್‍ಗೌಡ, ಮಂಜುನಾಥ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಶಾಸಕ ಚಿಕ್ಕಣ್ಣ, ಎನ್.ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.