ಒಗ್ಗಟ್ಟಿನ ಬಲದಿಂದ ಈ ಭಾರಿ ಕಾಂಗ್ರೇಸ್ ಅಧಿಕಾರ ಖಚಿತ  – ಮಧುಬಂಗಾರಪ್ಪ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 14 :-  ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ತರಲು ಹೆಚ್ಚು ಹೆಚ್ಚು ಸಂಘಟನೆ ಮಾಡುವ ಮೂಲಕ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ಪಣ ತೊಡುತ್ತಿದ್ದು ಒಗ್ಗಟ್ಟಿನ ಬಲದಲ್ಲಿ ಈ ಭಾರಿ ಕಾಂಗ್ರೇಸ್ ಅಧಿಕಾರಕ್ಕೆ ಬರುವುದು ಖಚಿತ  ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಭವಿಷ್ಯ ನುಡಿದರು.
ಅವರು ತಾಲೂಕಿನ ಕಾನಹೊಸಹಳ್ಳಿ ಹೊರವಲಯದ ಗಾಣಿಗರ ಸಮುದಾಯ ಭವನದ ಬಳಿ  ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುವಾಗ  ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಅವರಿಂದ ಸನ್ಮಾನ ಸ್ವೀಕರಿಸಿ  ಮಾತನಾಡಿದರು.   
 ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ.ವಿ.ಆರ್.ಸತ್ಯಬಾಬು, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಲೋಕಿಕೆರೆ ಲಕ್ಕಜ್ಜಿ ಮಲ್ಲಿಕಾರ್ಜುನ, ದಸಂಸ ತಾಲೂಕು ಅಧ್ಯಕ್ಷ ಎಳನೀರು ಗಂಗಣ್ಣ, ಗ್ಯಾರೇಜ್ ಸ್ವಾಮಿ, ತಾಪಂ ಮಾಜಿ ಸದಸ್ಯ ಮಾರಣ್ಣ, ಕಾರ್ಮಿಕರ ವಿಭಾಗದ ಅಧ್ಯಕ್ಷ ಹನುಮಂತಪ್ಪ ಸೇರಿ ಅನೇಕರು ಇದ್ದರು.