ಒಗ್ಗಟ್ಟಿನಿಂದ ಯಶಸ್ಸು ಸಾಧ್ಯ : ಕಲುಬರ್ಗಿ


ಧಾರವಾಡ, ಮಾ 14: ಸಮಾಜ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುಗಿ9 ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಆವರಣದ ಲೋಕೋಪಯೋಗಿ ಇಲಾಖೆಯ ಸಭಾ ಭವನದಲ್ಲಿ ಧಾರವಾಡ, ಹುಬ್ಬಳ್ಳಿ ಹಾಗೂ ಉಣಕಲ್ಲ ನಾಮದೇವ ಸಿಂಪಿ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 750 ನೇ ಜನ್ಮೂತ್ಸವ ಮತ್ತು ಪ್ರವಗ9 2 ಎ ಬಗ್ಗೆ ಚಿಂತನ ಮಂಥನ ಕಾಯ9ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಬಾಂಧವರು ಶಾಲೆ, ಗುಡಿ ನಿಮಿ9ಸಲು 8 ಗುಂಟೆ ಜಾಗೆ ಮನವಿಯನ್ನು ನೀಡಿದ್ದು ಅದನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಸಮಾಜ ನಿಮಗೆ ಏನು ನೀಡಿದೆ ಎನ್ನುವುದಕ್ಕಿಂತ, ನಿಮ್ಮ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೀರಿ ಎಂದು ಯೋಚಿಸಿ. ಬಟ್ಟೆ ಹೊಲೆಯುವ ಕಾಯಕ ಅಲ್ಲದೆ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರು, ಆಥಿ9ಕವಾಗಿ ಸಬಲವಾದವರು, ಸಮಾಜದ ಮಕ್ಕಳಿಗೆ ಶೈಕ್ಷಣಿಕವಾಗಿ ಮುಂದೆ ಬರಲು ಪೆÇ್ರೀತ್ಸಾಹ ನೀಡಿ ಎಂದರು.
ಧಾರವಾಡ ನಾಮದೇವ ಸಿಂಪಿ ಸಮಾಜದ ಗೌರವ ಅಧ್ಯಕ್ಷ ಹಾಗೂ ಚಿಂತನ ಮಂಥನ ಕಾಯ9ಕ್ರಮದ ಅಧ್ಯಕ್ಷತೆ ವಹಿಸಿದ್ದ ನಾರಾಯಣ ಕೋಪಡೆ9 ಮಾತನಾಡಿ, ನಮ್ಮ ಜಾತಿ ಸಂತ ನಾಮದೇವ ಮಹಾರಾಜರ ವಂಶಜರದು. ಅದು ಯಾರ ಕೆಡುಕನ್ನೂ ಬಯಸುವದಿಲ್ಲ. ಈಗ ಸದ್ಯ ನಮ್ಮ ಜಾತಿ 2ಎ ದಲ್ಲಿದೆ, ಪ್ರಬಲ ಜಾತಿಯವರನ್ನ 2ಎಗೆ ಸೇರಿಸುವ ವಿಚಾರ ಸರಕಾರಕ್ಕೆ ಬಿಟ್ಟಿದ್ದು. ನಮ್ಮ ಸಮಾಜ ಶೈಕ್ಷಣಿಕ, ಆಥಿ9ಕ, ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ನಮ್ಮ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಶಿಕ್ಷಣಕ್ಕಾಗಿ ಹಾಸ್ಟೇಲ್ ನಿಮಾ9ಣ ಮಾಡಲು ಸರಕಾರ ಅನುದಾನ ನೀಡಬೇಕು. ಅದೇ ರೀತಿ ರಾಜಕೀಯ ಸ್ಥಾನಮಾನ ನೀಡುವಾಗ ನಮ್ಮನ್ನು ಪರಗಣಿಸಬೇಕು. ಸಮಾಜದ ಉನ್ನತಿಗೆ ಒಗ್ಗಟ್ಟಾಗಿ ಧ್ವನಿಯತ್ತಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಚಿಂತನ ಮಂಥನ ಕಾಯ9ಕ್ರಮದ ಉಪಾಧ್ಯಕ್ಷ ಸುರೇಶ್ ಬಾರಟಕ್ಕೆ, ಸಂಚಾಲಕ ಮುರಳೀಧರ ಹಾಸಲಕರ, ಕಾಯ9ದಶಿ9 ವಿಜಯಕುಮಾರ ರಾಕುಂಡೆ, ಕೋಶಾಧ್ಯಕ್ಷ ಮಧುಸೂದನ ಪಿಸೆ, ಕನಾ9ಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಎನ್ ಎಮ್ ಸುರೇಶ್, ಉಪಾಧ್ಯಕ್ಷ ಶಂಕರ ಖಟಾವಕರ, ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ವಂಡಕರ ಹಾಗೂ ಪೆÇೀಲಿಸ್ ಇಲಾಖೆಯ ನಿವ್ರತ್ತ (ಡಿ ವಾಯ್ ಎಸ್ ಪಿ) ಎಸ್ ಎಸ್ ರೋಣದ ,ಲಕ್ಷ್ಮಣ ಕೋಳೆಕರ,ನಾಮದೇವ ಮುಸಳೆ, ರವಿ ಕಾಕಡೆ,ಮುರಳಿಧರ ರೇಣುಕೆ ,ರತ್ನಾಕರ ಪಾಸ್ತೆ,ಗದಿಗೆಪ್ಪ ಬಗಾಡೆ,ಜಗನ್ನಾಥ ಗಂಜೀಗಟ್ಟಿ ನಿಂಗಪ್ಪ ಮಾಳವದೆ.ರಶ್ಮಿ ಪಿಸೆ, ಪರಶುರಾಮ ಹಾಸಲಕರ,ಸಿ ಡಿ ಬೊಂಗಾಳೆ,ವಿನಯ ಮಹೇಂದ್ರಕರ,ಎಂ ಕೆ ಬಾಬಜಿ,ಆನಂದರಾವ ಪಾಸ್ತೆ,ಡಾ ರಾಜೇಂದ್ರ ಮಾಳೂದೆ,ಭರತರಾಜ ಪಿಸೆ,ಸೋಮನಾಥ ಗಂಜೀಗಟ್ಟಿ, ಗುಂಡು ಭಿಂಗೆ,ರಾಮರಾವ್ ಪತಂಗೆ,ದೀಪಕ್ ಲಾಳಗೆ,ವಿವೇಕ್ ಖಟಾವಕರ,ಸುರೇಖಾ ಚಿಕ್ಕೂಡೆ9 ಉಲ್ಲಾಸರಾವ ಭೂಂಗಾಳೆ,ವಿನಾಯಕ ಪಿಸೆ,ಸುಭಾಸ ಮಿರಜಕರ, ನ್ಯಾಯಾಧೀಶರಾದ , ಜಿಲ್ಲಾ ನ್ಯಾಯಾಧೀಶರಾದ ಡಿ ಆರ್ ರೇಣಕೆ, ಸಮಾಜದ ಹಿರಿಯ ಚೇತನರಾದ ವಿರುಪಾಕ್ಷಪ್ಪ ಕೋಪಡೆ9,ಮುರಳೀಧರರಾವ ಕೋಳೆಕರ,ಶಿವಪ್ಪ ಪಾಸ್ತೆ, ದಿನಕರ ಮಿರಜಕರ, ಗೋಪಾಳರಾವ ಸದರೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.