ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳನ್ನು ಮಾಡೋಣ

ರಾಯಚೂರು,ಜೂ.೧೨-
ಜನರ ನಿರೀಕ್ಷೆಗೆ ತಕ್ಕಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಕಾರ್ಯ ಮಾಡುವೆ,ಬಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳನ್ನು ಮಾಡೋಣವೆಂದು ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಅಭಿನಂದನೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ ರಾಯಚೂರು ಗ್ರಾಮಾಂತರ ಶಾಸಕರಾದ ಬಸವನಗೌಡ ದದ್ದಲ್ ಮಸ್ಕಿ ಶಾಸಕರಾದ ಬಸನಗೌಡ ತುರುವಿಹಾಳ್, ಎ ಐ ಸಿ ಸಿ ಕಾರ್ಯದರ್ಶಿಯಾದ ಎ.ವಸಂತ ಕುಮಾರ್ ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷರಾದ ನಾಗವೇಣಿ ಪಾಟೀಲ್, ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಶಶಿಕಲಾ ಭೀಮರಾಯ, ಮಹಿಳಾ ಕಾಂಗ್ರೆಸ್ ಸಿಟಿ ಮಹಿಳಾ ಅಧ್ಯಕ್ಷರು ಮಾಲಾ ಬಜಂತ್ರಿ, ಕಾಶೀಂಬಿ, ಭಾರತಿ ವೆಂಕಣ್ಣ, ಬ್ಲಾಕ್ ಅಧ್ಯಕ್ಷರು ದೇವದುರ್ಗ ಶ್ರೀದೇವಿ ನಾಯಕ, ಪಲ್ಲವಿ ಸುರೇಶ್, ದೇವಸುಗೂರು ನಿರ್ಮಲ, ಎಂಪಿಸಿಎಲ್ ಸುನಿತಾ ಸುರೇಶ್, ಲೀಲಾ ಅವರು ಸೇರಿದಂತೆ ಇನ್ನು ಅನೇಕ ಮಹಿಳೆಯರು ಸೇರಿ ಸಚಿವರಿಗೆ ಸನ್ಮಾನ ಮಾಡಿದರು.