ಒಗ್ಗಟ್ಟಿನಿಂದಲೇ ಹಕ್ಕು ಪಡೆಯುವುದಕ್ಕೆ ಸಾಧ್ಯ:ರೇಖಾ

ಚಿತ್ತಾಪುರ:ಜು.26:ಅಕ್ಷರ ದಾಸೋಹ ನೌಕರರು ಕಡಿಮೆ ವೇತನದಲ್ಲಿಯೇ ದುಡಿಯುತ್ತಿದ್ದರು, ಸರಕಾರ ನಮ್ಮ ನೆರವಿಗೆ ದಾವಿಸುತ್ತಿಲ್ಲ. ಪರಿಣಾಮ ನಮ್ಮ ಬೇಡಿಕೆ ಈಡೇರಿಸುವ ಕೊಳ್ಳುವುದಕ್ಕೆ ನೌಕರರು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಖಾ ಸುತಾರ್ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ಆಯೋಜಿಸಿದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಚಿತ್ತಾಪುರ, ಕಾಳಗಿ, ಶಹಾಬಾದ್ ತಾಲ್ಲೂಕು ಘಟಕದ 5ನೇ ಸಮ್ಮೇಳನದಲ್ಲಿ ಅವರು ಮಾತನಾಡಿದ ಅವರುಶಅಕ್ಷರ ದಾಸೋಹ ನೌಕರರು ಕೇವಲ 3600 ವೇತನದಲ್ಲಿ ದುಡಿಯುತ್ತಿದ್ದಾರೆ. ಇದರಿಂದ ಅವರ ಜೀವನ ನಿರ್ವಹಣೆ ತುಂಬ ಕಷ್ಟಕರವಾಗಿದೆ. ವೇತನ ಹೆಚ್ಚಳಕ್ಕೆ ಪದೇಪದೇ ಸರಕಾರಕ್ಕೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಶಾಲೆಗೆ ಗೈರಾಗಿ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುತ್ತಿದೆ. ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ, ಕೆ.ಪಿ.ಆರ್.ಎಸ್ ಶಹಾಬಾದ್ ಅಧ್ಯಕ್ಷ ರಾಯಪ್ಪ ಹುರುಮುಂಜಿ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ಹೀರೆಮಠ, ಸಿದ್ದಮ್ಮ ನಾಗೊರೆ ಮಾತನಾಡಿದರು.

ಸಮ್ಮೇಳನದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುವರ್ಣ ಚಿತ್ತಾಪುರ (ಅಧ್ಯಕ್ಷೆ), ಸಗೀತಾ ಗುತ್ತೇದಾರ ಕಾಳಗಿ(ಅಧ್ಯಕ್ಷೆ) ಸಂಪತ ಕುಮಾರಿ ಶಹಾಬಾದ್ (ಅಧ್ಯಕ್ಷೆ) ರನ್ನು ಆಯ್ಕೆ ಮಾಡಲಾಯಿತು.