ಒಗ್ಗಟಿನಿಂದ ಶ್ರಮಿಸಿ, ಸಂಘ ಬೆಳೆಸಿ ಹಾಲೇಶ

ಧಾರವಾಡ.ಏ 12: ವಿವಿಧ ಸರಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಧಾರವಾಡ ವಾಹನ ಚಾಲಕರು ಸಮನ್ವತೆಯಿಂದ ಕೇಲಸ ನಿರ್ವಹಿಸಿ, ಎಲ್ಲರೂ ಒಗ್ಗೂಡಿ ಸಮಸ್ಯೆಗಳನ್ನು ಬಗೆಹರಿಸಿ ಹಾಗೂ ಸಂಘವನ್ನು ಸಂಘಟಿಸಿ, ಬೆಳೆಸಲು ಎಲ್ಲರೂ ಶ್ರಮಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಹಾಲೇಶ ಅವರು ತಿಳಿಸಿದರು.
ಧಾರವಾಡ ಸೆಂಟ್ರಲ್ ಪಾರ್ಕನಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ, ಉಪಾಧ್ಯಕ್ಷ ಅಯ್ಕೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಅವರು ಮಾತನಾಡಿದರು.
ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಬೇಕು. ಎಲ್ಲ ಸರಕಾರಿ ವಾಹನಗಳ ಚಾಲಕರ ಹಿತರಕ್ಷಣೆಗೆ ಮತ್ತು ಅವರಿಗೆ ತೊಂದರೆಯಾದಾಗ ಒಗ್ಗಟ್ಟಿನಿಂದ ಹೊರಾಡಬೇಕು ಎಂದರು.
ಕ.ರಾ.ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡ್ರ ಅತಿಥಿಗಳಾಗಿ ಮಾತನಾಡಿ, ವಾಹನ ಚಾಲಕರ ಸಂಘ ರಚನೆ ಪೂರ್ವದಲ್ಲಿಯೂ ಚಾಲಕರಿಗೆ ತೊಂದರೆ, ಅನ್ಯಾಯ ಉಂಟಾದಾಗ ಸರಕಾರಿ ನೌಕರ ಸಂಘ ಮುಂದೆ ನಿಂತು ಪ್ರತಿಭಟಿಸಿದೆ. ಜಿಲ್ಲೆಯ ಎಲ್ಲ ಸರಕಾರಿ ನೌಕರರ ವೃತ್ತಿಗೌರವ, ಹಿತರಕ್ಷಣೆ ಕಾಪಾಡುವುದು ನಮ್ಮ ಆದ್ಯತೆ ಆಗಿದೆ. ಈ ನಿಟ್ಟಿನಲ್ಲಿ ಸಂಘದಿಂದ ಹೋರಾಟ ಸಹ ಮಾಡಲಾಗಿದೆ.
ಸರಕಾರಿ ವಾಹನ ಚಾಲಕರ ಸಂಘ ಬೆಳೆಯಲು ಅಗತ್ಯ ಸಹಕಾರ ನೀಡಿ, ಎಲ್ಲ ನೌಕರ ಬಂಧುಗಳೊಂದಿಗೆ ಮುನ್ಡಡೆಯುತ್ತೇವೆ ಎಂದು ಹೇಳಿದರು.
ಕೇಂದ್ರ ಸಂಘದ ಗೌರವ ಅಧ್ಯಕ್ಷ ಶ್ರೀನಿವಾಸ, ಕೇಂದ್ರ ಸಂಘದ ಕಾರ್ಯಾಧ್ಯಕ್ಷ ತಿಮ್ಮರಾಜು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ, ಖಂಜಾಚಿ ಗುಣಶೇಖರ, ಕಾರ್ಯದರ್ಶಿ ನಾಗರಾಜು, ಧಾರವಾಡ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಿದ್ಧನಗೌಡರ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಸಂಜಯ ತಳವಾರ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ಧಾರವಾಡ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಜಿಲ್ಲೆಯ ಪಧಾದಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಬಿ.ಡಿ.ಅಬ್ಬಿಗೇರಿ, ಉಪಾಧ್ಯಕ್ಷ ಶರಣಪ್ಪ ತಲ್ಲೂರ, ಗೌರವ ಕಾರ್ಯದರ್ಶಿ ಜಿ.ಎಚ್.ಉದಪುಡಿ, ಕಾರ್ಯದರ್ಶಿ ಸಂಜಯ ಕುಲಕರ್ಣಿ, ಖಜಾಂಚಿ ಎಂ.ಎ. ಬಾಬನವಾಲೆ, ಸಹ ಕಾರ್ಯದರ್ಶಿ ಬಿ.ಎಲ್.ಪಾಟೀಲ, ಸಂಘಟನಾ ಕಾರ್ಯದರ್ಶಿ ಅಶೋಕ ಸಿತಿಮನಿ, ಮುಖ್ಯ ಸಂಚಾಲಕರಾಗಿ ಎ.ಎಚ್.ಹುಲಕೋಪ್ಪ ಅವರನ್ಬು ಹಾಗೂ ಜಿಲ್ಲೆಯ 15 ಜನ ಪದಾಧಿಕಾರಗಳ ಒಮ್ಮತದಿಂದ ಜಿಲ್ಲಾ ಘಟಕಕ್ಜೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶರಣಪ್ಪ ತಲ್ಲೂರ ಪ್ರಾರ್ಥಸಿದರು. ವಾರ್ತಾ ಇಲಾಖೆ ವಾಹನ ಚಾಲಕ ಎಮ್.ಎಸ್.ಚೊಪದಾರ ವಂದಿಸಿದರು. ಬಿ.ಡಿ.ಅಬ್ಬಿಗೇರಿ ಕಾರ್ಯಕ್ರಮ ನಿರೂಪಿಸಿದರು.