ಒಕ್ಕೂಟದ ಕಲಾವಿದರಿಗೆ ಗುರುತಿನ ಚೀಟಿ ವಿತರಣೆಗೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ :ಸೋನಾರೆ

ಬೀದರ, ಸೆ. 21 ಃ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಆಂಧ್ರ ಮಾದರಿಯಲ್ಲಿ ಕಲಾವಿದರಿಗೆ ಮಾಶಾಸನ ಹೆಚ್ಚಿಸಬೇಕು., ಗುರುತಿನ ಚೀಟಿ ಸೇರಿದಂತೆ ಎಂಬಿತ್ಯಾದಿ ಪ್ರಮುಖ ಹತ್ತಾರು ಬೇಡಿಕೆಗಳ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಒಕ್ಕೂಟದ ಹಲವು ಬೇಡಿಕೆಗಳ ಪೈಕಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲಕುಮಾರ ಅವರು ಆಂಧ್ರ ಮಾದರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಪ್ರಕಾರದ ಕಲಾವಿದರಿಗೆ ಗುರುತಿನ ಚೀಟಿ ವಿತರಣೆಗೆ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಶೀಘ್ರದಲ್ಲಿ ಎಲ್ಲ ಜಿಲ್ಲೆಗಳ ಕಲಾವಿದರಿಗೆ ಗುರುತಿನ ಚೀಟಿ ವಿತರಿಸಲಾಗುತ್ತದೆ. ಅದೇ ರೀತಿಯಾಗಿ ಇನ್ನೊಂದು ಪ್ರಮುಖ ಬೇಡಿಕೆಯಾದ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರದಿಂದ ಟ್ರಸ್ಟಗಳನ್ನು ಕೂಡ ಕೂಡಲೇ ಪ್ರತಿಷ್ಠಾಪನೆ ಮಾಡಬೇಕು ಎಂದು ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಾವಿದರ ಮಾಶಾಸನ ಪಡೆಯಲು ಇರುವ ವಯಸ್ಸು 58 ರಿಂದ 50 ಕ್ಕೆ ಇಳಿಸಬೇಕು., ಕಲಾವಿದರಿಗೆ ಕೊಡುವ ಮಾಶಾಸನ 2ರಿಂದ 5 ಸಾವಿರ ರೂಪಾಯಿಗಳಿಗೆರಿಸಬೇಕು., ಸ್ಥಳೀಯ ಸಂಸ್ಥೆಗಳ, ಪಧವಿದರರ, ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಮಾದರಿಯಲ್ಲಿಯೇ ಕಲಾವಿದರ ಕ್ಷೇತ್ರದಿಂದಲೂ ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ಕಲಾವಿದರರಿಗೆ ಮತದಾನದ ಹಕ್ಕು ನೀಡಬೇಕು., ಪ್ರೋ. ಬರಗೂರು ರಾಮಚಂದ್ರಪ್ಪನವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಸಾಂಸ್ಕøತಿಕ ನೀತಿ ನಿರೂಪಣಾ ವರದಿಯನ್ನು ಜಾರಿಗೆ ತರಬೇಕು., ಯಕ್ಷಗಾನದ ಕಲಾವಿದರಿಗೆ ಮನ್ನಣೆ ನೀಡಿದಂತೆ ಬಯಲಾಟದ ಕಲಾವಿದರಿಗೂ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಬೇಕು., ಸಂತ ಶಿಶುನಾಳ ಶರೀಫರ ಕ್ಷೇತ್ರದ ಅಭಿವೃದ್ಧಿ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಡಗೋಳ ಗ್ರಾಮದ ತತ್ತ್ವಪದಕಾರ ಕಡಗೋಳ ಮಡಿವಾಳಪ್ಪನವರ ಹೆಸರಿನಲ್ಲಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕು., ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಭೆ ಹಾಗೂ ಸಮಾರಂಭಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶ ನೀಡಬೇಕು ಹಾಗೂ ರಂಗ ಶಿಕ್ಷಕರನ್ನು ನೇಮಕ ಮಾಡಿದರೆ, ವಿದ್ಯಾರ್ಥಿಗಳಲ್ಲಿ ಓದುವ ಬಗ್ಗೆ ಕ್ರೀಯಾಶೀಲತೆ ಹೆಚ್ಚುತ್ತದೆ. ಈ ಹಿಂದೆ ಸರ್ಕಾರ 40 ಜನರನ್ನು ರಂಗ ಶಿಕ್ಷಕರೆಂದು ನೇಮಕ ಮಾಡಿತ್ತು. ನಂತರ ಮತ್ತೇ ರಂಗ ಶಿಕ್ಷಕರನ್ನು ನೇಮಕ ಮಾಡಲೇ ಇಲ್ಲ. ರಾಜ್ಯ ಸರ್ಕಾರ ಈ ಕೂಡಲೇ ರಂಗ ಶಿಕ್ಷಕರನ್ನು ನೇಮಕ ಮಾಡಬೇಕು ಎಂಬಿತ್ಯಾದಿ ಇನ್ನೂಳಿದ ಬೇಡಿಕೆಗಳು ರಾಜ್ಯ ಸರ್ಕಾರ ಹಂತ ಹಂತವಾಗಿ ಒಂದೊಂದಾಗಿ ಈಡೇರಿಸುತ್ತೆಂಬ ವಿಶ್ವಾಸ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅವರು ವ್ಯಕ್ತಪಡಿಸಿದ್ದಾರೆ.