ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ನಾಗೇನಹಳ್ಳಿ ಪಂಚಾಯಿತಿ ಮುಂದೆ ಪ್ರತಿಭಟನೆ !

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ23: ಮಹಾತ್ಮಾಗಾಂಧಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಯಾ ದೇಶದ ಎಲ್ಲರಿಗೂ ವಸತಿ ಕಲ್ಪಿಸೋ ಯೋಜನೆ ಹಾಕಿದ್ದರೆ, ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವಸತಿ ಕಲ್ಪಸೋದು ಇರಲಿ ದಶಕಗಳಿಂದ ಗುಡಿಸಲಲ್ಲಿ ವಾಸಮಾಡುವವರನ್ನು ಒಕ್ಕಲೇಬ್ಬಿಸುವುದು ದುರಾದೃಷ್ಟಕರ ಎಂದು ಡಿವೈಎಫ್‍ಐ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ಮಾಡಿದರು.
ಹೊಸಪೇಟೆ ತಾಲೂಕಿನ ನಾಗೇನಹಳ್ಳಿಯಲ್ಲಿ ಬುಧುವಾರ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಪಂಚಾಯಿತಿಯಿಂದ ನಿರಾಶ್ರಿತರಿಗೆ ಜಾಗ ನೀಡಬೇಕು, ಮನೆ ಕಟ್ಟಿಸಿಕೊಡಬೇಕು ಎಂದು ಕೇಳುವ ಬದಲು,  ನಾವೇ ನಿರ್ಮಿಸಿಕೊಂಡ ಗುಡಿಸಲು, ಕಳೆದ 10 ವರ್ಷಗಳಿಂದ ವಾಸವಾಗಿರುವ ಸ್ಥಳವನ್ನು ಎತ್ತಂಗಡಿ ಮಾಡಬೇಡಿ ಎಂದು ತಮ್ಮ ಮನವಿಯನ್ನು ಸಲ್ಲಿಸಿದರು. ಜೀವನವೇ ಕಷ್ಟವಾಗಿರುವಾಗ ಸಾಲ ಮಾಡಿ ನಿರ್ಮಾಣ ಮಾಡಿಕೊಂಡು ಗುಡಿಸಲು ತೆರವುಗೊಂಡರೆ ನಮ್ಮ ಜೀವನ ಬೀದಿಪಾಲಾಗಲಿದೆ ಎಂದು ನಿವಾಸಿಗಳ ಪರವಾಗಿ ಈಡಿಗರ ಮಂಜುನಾಥ ಮಾತನಾಡಿದರು.
ಬೇಡಿಕೆಗಳು
ಮನೆಗಳಿಗೆ ಹಕ್ಕು ಪತ್ರ ನೀಡಬೇಕು, ಮೂಲಸೌಕರ್ಯಗಳನ್ನು ನೀಡಬೇಕು, ಈ ಪ್ರದೇಶದಲ್ಲಿ ಒತ್ತುವರಿ ಮಾಡಿದವರನ್ನು ತೆರವುಗೊಳಿಸಬೇಕು
ಜಿಲ್ಲಾಧ್ಯಕ್ಷ ವಿ.ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಅರ್ಜುನ್, ಮಹಮ್ಮದ್ ಖಾಲಿದ್, ರೇಣುಕಾ, ನಿಂಗಮ್ಮ, ಬಸವರಾಜ್ ಸೇರಿದಂತೆ ನಿವಾಸಿಗಳು ಹಾಜರಿದ್ದು ತಮ್ಮ ಗೋಳನ್ನು ತೋಡಿಕೊಂಡರು.