ಒಕ್ಕಲಿಗರ ಸಂಘ ಚುನಾವಣೆ ಮೂರು ತಿಂಗಳು ಮುಂದೂಡಿಕೆ


ಬೆಂಗಳೂರು, ಏ. ೨೧- ಮುಂದಿನ ತಿಂಗಳು ೧೬ ರಂದು ನಡೆಯಬೇಕಾಗಿದ್ದ ಒಕ್ಕಲಿಗರ ಸಂಘದ ಚುನಾವಣೆಯನ್ನು ಮೂರು ತಿಂಗಳ ಕಾಲ ಹೈಕೋರ್ಟ್ ಮುಂದೂಡಿದೆ.
ರಾಜ್ಯದಾದ್ಯಂತ ಕೊರೊನಾ ಅಲೆ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ ಚುನಾವಣಾ ಮುಂದೂಡುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದರು. ಈ ವರದಿ ಆಧರಿಸಿ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಚುನಾವಣೆಯನ್ನು ಮೂರು ತಿಂಗಳ ಕಾಲ ಮುಂದೂಡಿದೆ.