ಒಕ್ಕಲಿಗರ ಸಂಘದ ಚುನಾವಣೆ ಕೆಂಚಪ್ಪಗೌಡ ಮತಯಾಚನೆ

ಆನೇಕಲ್.ನ.೨೮:ಡಿಸೆಂಬರ್ ೧೨ ರಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಇಂದು ತಮಿಳುನಾಡಿನ ಹೊಸೂರುನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡರವರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ಮತ್ತು ಸಾರ್ವಜನಿಕವಾಗಿ ಮತಯಾಚನೆ ಮಾಡಲಾಯಿತು.
ಇನ್ನು ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡರ ತಂಡಕ್ಕೆ ಒಕ್ಕಲಿಗರ ಕುಲಭಾಂದವರು ಬೇಷ್ ರತ್ ಬೆಂಬಲ ಸೂಚಿಸಿದರು. ಕೆಂಚಪ್ಪಗೌಡರ ಉತ್ತಮ ಜನಪರ ವ್ಯಕ್ತಿಯಾಗಿದ್ದು ಅವರ ಕಾಲದಲ್ಲಿ ಸಂಘದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದು ಡಿಸೆಂಬರ್ ೧೨ ರಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರುಗಳ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಕೆಂಚಪ್ಪಗೌಡರ ತಂಡವನ್ನು ಮತ್ತೋಮ್ಮೆ ರಾಜ್ಯ ಒಕ್ಕಲಿಗರ ಸಂಘಕ್ಕೆ ಮರು ಆಯ್ಕೆ ಮಾಡುತ್ತೇವೆ ಎಂದು ಸಭೆಯಲ್ಲಿ ನೆರದಿದ್ದ ಒಕ್ಕಲಿಗ ಕುಲಭಾಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಾಮಚಂದ್ರ, ಹೊಸೂರು ಶಾಸಕ ವೈ. ಪ್ರಕಾಶ್, ಕೃಷ್ಣಗಿರಿ ಜಿಲ್ಲಾ ಒಕ್ಕಲಿಗರ ಗೌಡರ ಮಹಾಜನ ಸಂಘದ ಜಿಲ್ಲಾಧ್ಯಕ್ಷ ಗೋಪಾಲ್, ಒಕ್ಕಲಿಗರ ಸಂಘದ ಅಧ್ಯಕ್ಷ ಮಣಿ, ಉಪಾಧ್ಯಕ್ಷ ಮನು, ಯುವ ಮುಖಂಡರಾದ ಸಾಯಿ ಅಶೋಕ್, ವಕೀಲರು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಗೌಡರು, ವಕೀಲರಾದ ತಿಮ್ಮರಾಯಪ್ಪ, ಯುವ ಮುಖಂಡರಾದ ಬಾಸ್ಕರ್ ಬಾಬು, ವಿಎಚ್.ಪಿ. ನರಸಿಂಹ, ಜಗದೀಶ್, ಸುರೇಶ್, ಶ್ರೀನಿವಾಸ್, ಹೊಸೂರು ನರೇಂದ್ರಬಾಬು, ಪ್ರದೀಪ್ ಗೌಡ, ವೇಣು ಗೋಪಾಲ್ ಮತ್ತು ಕೆಂಚಪ್ಪಗೌಡರ ತಂಡದ ಅಭ್ಯರ್ಥಿಗಳು ಮತ್ತು ಒಕ್ಕಲಿಗ ಕುಲಭಾಂದವರು ಸಭೆಯಲ್ಲಿ ಭಾಗವಹಿಸಿದ್ದರು.