ಒಕ್ಕಲಿಗರ ಅಭಿವದ್ಧಿಗಾಗಿ ನನ್ನನ್ನು ಬೆಂಬಲಿಸಿ-ಮಂಜುನಾಥ್


ರಾಮನಗರ.ನ೧೬: ರಾಜ್ಯ ಒಕ್ಕಲಿಗರ ಸಂಘ ಉಳ್ಳವರ ಸ್ವಾರ್ಥಕ್ಕಾಗಿ ಸ್ಥಾಪನೆಯಾಗಿದ್ದಲ್ಲ ಸಮಸ್ತ ಒಕ್ಕಲಿಗರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಎಂಬುದನ್ನು ಸಾಬೀತು ಪಡಿಸಲು ನನ್ನನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಅಭ್ಯರ್ಥಿ ಎಸ್ .ಮಂಜುನಾಥ್ ಮನವಿ ಮಾಡಿದರು.
ಒಕ್ಕಲಿಗರ ಸಂಘದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟಿ ಖರ್ಚು ಮಾಡಿ ಲೂಟಿ ಹೊಡೆಯಲು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಸಮುದಾಯದ ಬದುಕನ್ನು ಬದಲಾಯಿಸಲು ಸ್ಪರ್ಧೆ ಮಾಡುತ್ತಿzನೆ. ಸಂಘಟನೆ ಉದ್ಯೋಗವಲ್ಲ, ಅದೊಂದು ಸಾಮಾಜಿಕ ಜವಾಬ್ದಾರಿ ಎಂದರು. ಒಕ್ಕಲಿಗರ ಸಂಘ ಇಂದು ತನ್ನ ಮೂಲ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಘವನ್ನು ಆಡಳಿತಾಧಿ ಕಾರಿಯೊಬ್ಬರು ಮುನ್ನಡೆಸುವ ದುಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇಲ್ಲಿವರೆಗೆ ರಾಮನಗರ ಜಿಲ್ಲೆಯಿಂದ ನಿರ್ದೇಶಕರಾಗಿ ಆಯ್ಕೆಯಾದವರು ಯಾರು ಮತದಾರರ ಋಣ ತೀರಿಸುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಒಕ್ಕಲಿಗ ಸಮುದಾಯವನ್ನು ಪ್ರಾದೇಶಿಕತೆ ಹಾಗೂ ಉಪ ಜಾತಿಗಳ ಹೆಸರಿನಲ್ಲಿ ಒಡೆಯುವ ಪ್ರಯತ್ನವನ್ನು ಒಕ್ಕಲಿಗರೇ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಯಾವುದೊ ಒಂದು ಉಪ ಜಾತಿಗೆ ಸೀಮಿತವಲ್ಲ. ೧೧೫ ಉಪ ಜಾತಿಗಳು ಒಂದೇ ಆಗಿವೆ ಎಂದು ಹೇಳಿದರು. ಉಪ ಪಂಗಡಗಳ ಹೆಸರಿನಲ್ಲಿ ವಿಘಟನೆಯಾಗಿರುವ ನಮ್ಮ ಸಮುದಾಯವನ್ನು ಭಾವನಾತ್ಮಕವಾಗಿ ಒಂದು ಗೂಡಿಸಬೇಕಾಗಿದೆ. ಇಲ್ಲದಿದ್ದಲ್ಲಿ ಒಕ್ಕಲಿಗರು ಬಹುಸಂಖ್ಯಾತರು ಹಾಗೂ ಪ್ರಬಲರು ಎಂಬ ಪ್ರತಿಷ್ಠೆ ಕಳಚಿ ಬೀಳಲಿದೆ. ಆದ್ದರಿಂದ ನಮ್ಮ ಸಮುದಾಯ ಒಗ್ಗೂಡಿಸುವೆ ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು. ಸದಸ್ಯ ಸ್ನೇಹಿ ವೆಬ್ ಸೈಟ್ ನಿರ್ವಹಣೆ. ರಾಜ್ಯದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆದ್ಯತೆ ಮೇರೆಗೆ ಸಮುದಾಯ ಭವನ, ಅಂತರರಾಷ್ಟ್ರೀಯ ಗುಣಮಟ್ಟದ ಶಾಲಾ – ಕಾಲೇಜುಗಳು ಮತ್ತು ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಒತ್ತು ನೀಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಾದ ತಮ್ಮಣ್ಣ, ಹೊನ್ನರಾಜು, ಚೌಡಯ್ಯ, ನಂದೀಶ್, ಚನ್ನೇಗೌಡ, ಸತೀಶ್ ಕೆ.ಗೌಡ, ಎಂ.ಡಿ.ಶಿವಕುಮಾರ್, ಭೈರಪ್ಪ ಇದ್ದರು.