ಒಕ್ಕಲಗೇರಿ ಬಡಾವಣೆಯಲ್ಲಿ 3000 ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ

ಸಂಜೆವಾಣಿ ವಾರ್ತೆ
ನಂಜನಗೂಡು: ಜ.23:- ಪಟ್ಟಣದ ಒಕ್ಕಲಗೇರಿ ಬಡಾವಣೆಯಲ್ಲಿ 3000ಕ್ಕೂ ಹೆಚ್ಚು ಭಕ್ತಾದಿಗಳಿಗೆ ಪ್ರಸಾದವನ್ನು ನೀಡಿದರು ಎಲ್ಲೆಲ್ಲೂ ಜೈ ಶ್ರೀರಾಮ್ ಭಜನೆ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ರಾಮ ಭಜನೆ ಪ್ರಸಾದ ವಿನಿಯೋಗ ಬಹಳ ವಿಜೃಂಭಣೆಯಿಂದ ನಡೆಯಿತು ಪಟ್ಟಣದ ಒಕ್ಕಲಗೇರಿ ಬಡಾವಣೆಯಲ್ಲಿ 3000 ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ಬೆಳಗ್ಗೆಯಿಂದಲೇ ರಾಮ ಲಕ್ಷ್ಮಣ ಸೀತೆ ಆಂಜನೇಯ ದೇವರುಗಳಿಗೆ ಹಾಲು ಅಭಿಷೇಕ ಪಂಚಾಮೃತ ಅಭಿಷೇಕ ಎಳೆನೀರು ಅಭಿಷೇಕ ತುಪ್ಪದ ಅಭಿಷೇಕ ಈ ರೀತಿ ಅನೇಕ ಅಭಿಷೇಕಗಳನ್ನು ಮಾಡಿ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಿದರು ಹೋಮ ಅವನ ಬಹಳ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಚಾಮಲಾಪುರ ಬೀದಿ ತಮಲಾಪುರ ಹುಂಡಿ ದೇವರಮ್ನಳ್ಳಿ ಬಡವಣೆ ದೇವಸ್ಥಾನ ಮುಂಭಾಗ ಸೇರಿದಂತೆ ಹಲವಾರು ಅಂಗಡಿಗಳ ಮುಂದೆ ಸರ್ಕಲ್ ಗಳ ಬಳಿ ಶ್ರೀರಾಮನ ಫೆÇೀಟೋ ಹಾಕಿ ಭಕ್ತಿ ಭಾವದಿಂದ ಪೂಜೆ ಮಾಡಿ ಪ್ರಸಾದ ವಿನ್ಯೋಗ ಮಾಡಿದರು ಒಟ್ಟಾರೆ ನಂಜನಗೂಡಿನಲ್ಲಿ ಹಬ್ಬದ ವಾತಾವರಣ ಉಂಟಾಗಿತ್ತು.